ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಪದಗ್ರಹಣ ಹಾಗೂ ಉದ್ಘಾಟನಾ ಸಮಾರಂಭ

ಉಡುಪಿ: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದ ಪದಗ್ರಹಣ ಹಾಗೂ ಉದ್ಘಾಟನಾ ಸಮಾರಂಭ ಉಡುಪಿಯ ಗುಂಡಿಬೈಲ್ ನಲ್ಲಿರುವ ಬ್ರಾಹ್ಮಿ ಸಭಾಭವನದಲ್ಲಿ ಇಂದು ನಡೆಯಿತು. ಕನ್ನಡದ ಬಾವುಟವನ್ನು ಜಿಲ್ಲಾಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಅವರು ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಎಚ್.ಪಿ ಅವರಿಗೆ ಹಸ್ತಾಂತರಿಸಿದರು ಸಮಾರಂಭದಲ್ಲಿ ಮನೋವೈದ್ಯ ಡಾ. ಪಿ ವಿ ಭಂಡಾರಿ ಉದ್ಘಾಟಿಸಿ ಮಾತನಾಡುತ್ತಾ ಕನ್ನಡ ವಿವಿಧತೆಯ ಭಾಷೆಯಾಗಿದೆ. ಪುಸ್ತಕ ಪ್ರೀತಿ ನಾವೆಲ್ಲರೂ ಬೆಳೆಸಬೇಕಾಗಿದೆ. ನಮ್ಮ ಶ್ರೇಷ್ಠ ಕವಿಗಳು ನಮ್ಮ ನಾಡು ನುಡಿಗೆ ಬಹಳಷ್ಟು ಕೆಲಸ […]