ಅಡಿಕೆ ನುಂಗಿ ಒಂದು ವರ್ಷದ ಮಗು ಮೃತ್ಯು
ಶಿವಮೊಗ್ಗ: ಅಡಿಕೆ ನುಂಗಿ ಉಸಿರುಗಟ್ಟಿ ಒಂದು ವರ್ಷದ ಮಗುವೊಂದು ಮೃತಪಟ್ಟ ಹೃದಯವಿದ್ರಾವಕ ಘಟನೆ ತೀರ್ಥಹಳ್ಳಿ ತಾಲೂಕಿನ ಹೆದ್ದೂರು ಗ್ರಾಮದಲ್ಲಿ ನಡೆದಿದೆ. ಅರ್ಚನಾ ಮತ್ತು ಸಂದೇಶ್ ದಂಪತಿಯ ಹದಿಮೂರು ತಿಂಗಳ ಮಗು ಶ್ರೀಹಾನ್ ಮೃತಪಟ್ಟಿದೆ. ವಿಷಯ ತಿಳಿಯುತ್ತಿದ್ದಂತೆ ಅದೇ ರಸ್ತೆಯಲ್ಲಿ ಸಂಚಾರಿಸುತಿದ್ದ ಆರೋಗ್ಯ ಸಹಾಯಕಿ ಲಕ್ಮೀ ಎಂಬುವರು ಗಮನಿಸಿ ಮಗುವನ್ನು ಕೂಡಲೇ ಹತ್ತಿರದ ಕಾಟಗಾರು ಆಸ್ಪತ್ರೆಗೆ ರವಾನಿಸಲು ತಿಳಿಸಿದ್ದಾರೆ. ಅಲ್ಲಿ ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ಸ್ಥಳೀಯ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಆದರೆ, […]