ಒಡಿಶಾ ತ್ರಿವಳಿ ರೈಲು ದುರಂತ: ಸಿಬಿಐ ವಿಚಾರಣೆ ಬಳಿಕ ಕುಟುಂಬ ಸಮೇತ ನಾಪತ್ತೆಯಾದ ಸಿಗ್ನಲ್ ಜೂನಿಯರ್ ಎಂಜಿನಿಯರ್
ಭುವನೇಶ್ವರ: 289 ಮಂದಿ ಪ್ರಾಣ ಕಳೆದುಕೊಂಡ ಒಡಿಶಾ ತ್ರಿವಳಿ ರೈಲು ದುರಂತದ ತನಿಖೆಯನ್ನು ಮುಂದುವರೆಸಿರುವ ಸಿಬಿಐ, ಸೊರೊ ಸೆಕ್ಷನ್ ಸಿಗ್ನಲ್ ಜೂನಿಯರ್ ಇಂಜಿನಿಯರ್ (ಜೆಇ) ಬಾಡಿಗೆ ಮನೆಯನ್ನು ಸೋಮವಾರ ಸೀಲ್ ಮಾಡಿದೆ. ಇಂಡೋ-ಏಷ್ಯನ್ ನ್ಯೂಸ್ ಸರ್ವಿಸ್ ವರದಿ ಪ್ರಕಾರ, ಅಮೀರ್ ಖಾನ್ ಎಂಬ ಜೆಇಯನ್ನು ಆರಂಭದಲ್ಲಿ ಸಿಬಿಐ ಅಜ್ಞಾತ ಸ್ಥಳದಲ್ಲಿ ವಿಚಾರಣೆಗೆ ಒಳಪಡಿಸಿದೆ. ಏಜೆನ್ಸಿ ಅಧಿಕಾರಿಗಳು ಸೋಮವಾರ ಸೊರೊದಲ್ಲಿರುವ ಖಾನ್ ವಾಸವಾಗಿದ್ದ ಬಾಡಿಗೆ ಮನೆಗೆ ತಲುಪಿದಾಗ ಮನೆಗೆ ಬೀಗ ಹಾಕಲ್ಪಟ್ಟಿದೆ ಮತ್ತು ಆತನ ಇಡೀ ಕುಟುಂಬ ನಾಪತ್ತೆಯಾಗಿದೆ. […]