ಅಟ್ಲಾಂಟಿಕ್ ಸಾಗರದೊಳಗೆ ಕಿರು ಜಲಾಂತರ್ಗಾಮಿ ಸುಳಿವು ಪತ್ತೆ, ಬಿಲಿಯನೇರ್ ದಾವೂದ್ಗಾಗಿ ಶೋಧ

ಟೈಟಾನಿಕ್ ಅವಶೇಷಗಳನ್ನು ನೋಡಲು ಹೋಗಿ ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿರುವ ಟೈಟಾನ್ ಎಂಬ ಕಿರು ಜಲಾಂತರ್ಗಾಮಿ ಹುಡುಕಾಟದಲ್ಲಿ ನಿರ್ಣಾಯಕ ಬೆಳವಣಿಗೆ ಕಂಡುಬಂದಿದೆ. ಬೋಸ್ಟನ್, ಅಮೆರಿಕ: ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾದ ಮಿನಿ ಜಲಾಂತರ್ಗಾಮಿ ಶೋಧ ಕಾರ್ಯಾಚರಣೆಯಲ್ಲಿ ನಿರ್ಣಾಯಕ ಹೆಜ್ಜೆ ಇಟ್ಟಿದೆ. ಕೆನಡಾದ ಗಸ್ತು ವಿಮಾನ P-3 ನೀರೊಳಗಿನ ಶಬ್ದಗಳನ್ನು ಪತ್ತೆ ಮಾಡಿದೆ ಎಂದು ಅಮೆರಿಕನ್ ಕೋಸ್ಟ್ ಗಾರ್ಡ್ ಹೇಳಿದೆ. ಕೆನಡಾದ P-3 ಕಣ್ಗಾವಲು ವಿಮಾನವು ವೈಮಾನಿಕ ಚಟುವಟಿಕೆಗಳನ್ನು ನಡೆಸುತ್ತಿರುವಾಗ ನೀರೊಳಗಿನ ಶಬ್ದಗಳನ್ನು ಪತ್ತೆಹಚ್ಚಿದೆ ಎಂದು US ಕೋಸ್ಟ್ ಗಾರ್ಡ್ ಹೇಳಿದೆ. […]