ಅಣ್ವಸ್ತ್ರ ‘ಬ್ಯೂರ್ ವೆಸ್ಟ್ನಿಕ್’ ಕ್ಷಿಪಣಿ ಪರೀಕ್ಷೆ ಯಶಸ್ವಿ: ರಷ್ಯಾ ಅಧ್ಯಕ್ಷ ಪುಟಿನ್ ಘೋಷಣೆ

ಮಾಸ್ಕೊ: ಅಣ್ವಸ್ತ್ರ ಸಜ್ಜಿತ ಶಕ್ತಿಶಾಲಿ ‘ಬ್ಯೂರ್‌ವೆಸ್ಟ್‌ನಿಕ್’ ಕ್ರೂಸ್‌ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಭಾನುವಾರ ಹೇಳಿದ್ದಾರೆ.ಈ ಕ್ಷಿಪಣಿ ನಿಯೋಜನೆಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವಂತೆ ಸಶಸ್ತ್ರ ಪಡೆಗಳಿಗೆ ಅವರು ಆದೇಶಿಸಿದ್ದಾರೆ. ಈ ಕ್ಷಿಪಣಿ ಕಾರ್ಯಾಚರಣೆ ವ್ಯಾಪ್ತಿಗೆ ಮಿತಿ ಇಲ್ಲ. ಇದು ಅಣ್ವಸ್ತ್ರ ಸಿಡಿತಲೆಗಳನ್ನು ಹೊತ್ತೊಯ್ಯುವುದು ಮಾತ್ರವಲ್ಲದೇ, ಆಣುಶಕ್ತಿಯಿಂದಲೇ ಕಾರ್ಯ ನಿರ್ವಹಿಸುವುದು ವಿಶೇಷ. ಕ್ಷಿಪಣಿ ಪರೀಕ್ಷೆ ಬಳಿಕ ಸೇನಾ ಸಿಬ್ಬಂದಿ ಮುಖ್ಯಸ್ಥ ಹಾಗೂ ಸೇನೆಯ ಇತರ ಅಧಿಕಾರಿಗಳ ಜೊತೆ ವರ್ಚುವಲ್‌ ಆಗಿ ಪುಟಿನ್‌ […]