ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಕ್ರೀಡಾಕೂಟಕ್ಕೆ ಚಾಲನೆ

ನಿಟ್ಟೆ: ಪಠ್ಯ ವಿಷಯದಲ್ಲಿನ ಪ್ರಾವೀಣ್ಯತೆಯೊಂದಿಗೆ ದೈಹಿಕ ಸದೃಢತೆಯ ಬಗೆಗೂ ವಿದ್ಯಾರ್ಥಿಗಳು ಗಮನಹರಿಸಬೇಕು. ಇಂದಿನ ವಿದ್ಯಾರ್ಥಿಗಳು ಆಟವಾಡಲು ಮೈದಾನವನ್ನು ಬಳಸದೆ ಕಂಪ್ಯೂಟರ್‌ನನ್ನು ಬಳಸುತ್ತಿರುವುದು ಖೇದಕರವಿಚಾರ” ಎಂದು ನಿಟ್ಟೆಯ ಡಾ.ಎನ್.ಎಸ್.ಎ.ಎಂ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾಕುಮಾರಿ ಬಿ.ಕೆ ಅಭಿಪ್ರಾಯಪಟ್ಟರು. ಅವರು ಜ.೨೨ರಂದು ಎನ್.ಇ.ಟಿ ಕ್ಯಾಂಪಸ್‌ನ ಬಿ.ಸಿ.ಆಳ್ವಾ ಕ್ರೀಡಾಸಂಕೀರ್ಣದಲ್ಲಿ ನಡೆದ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ೩೪ನೇ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್, ವಿದ್ಯಾರ್ಥಿಗಳು ನಮ್ಮ […]