ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಶಿಕ್ಷಕರ ಹಾಗೂ ಇಂಜಿನಿಯರ್ ದಿನಾಚರಣೆ

ನಿಟ್ಟೆ: “ನಾವು ಉದ್ಯೋಗಕ್ಕೋಸ್ಕರ ಹಾತೊರೆಯದೆ ಉದ್ಯೋಗಸೃಷ್ಠಿಗೆ ಕಾರಣರಾಗಬೇಕು. ಕೃಷಿ ಕ್ಷೇತ್ರದಲ್ಲಿ ಅದೆಷ್ಟೋ ತಂತ್ರಜ್ಞಾನ ಕ್ರಾಂತಿಯನ್ನು ಅಳವಡಿಸಿಕೊಳ್ಳುವ ಅವಕಾಶವಿದೆ. ಈ ಎಲ್ಲಾ ಮುಕ್ತ ಅವಕಾಶವನ್ನು ನಾವು ಉಪಯುಕ್ತವಾಗಿ ಬಳಸಿ ದೈನಂದಿನ ಚಟುವಟಿಕೆಗಳಿಗೆ ಸಹಾಯವಾಗುವಂತಹ ತಂತ್ರಜ್ಞಾನದ ಆವಿಷ್ಕಾರದಲ್ಲಿ ತೊಡಗಿದರೆ ಅದೆಷ್ಟೋ ಮಂದಿ ರೈತರಿಗೆ ಅನುಕೂಲವಾಗುತ್ತದೆ” ಎಂದು ‘ಮಿಲ್ಕ್ ಮಾಸ್ಟರ್’ ಹಾಲುಕರೆಯುವ ಯಂತ್ರವನ್ನು ಆವಿಷ್ಕರಿಸಿ ರಾಷ್ಟ್ರಪತಿಯವರಿಂದ ಪುರಸ್ಕೃತರಾದ ರಾಘವ ಗೌಡ ಪಲ್ಲತ್ತಡ್ಕ ಅಭಿಪ್ರಾಯಪಟ್ಟರು. ಅವರು ಸೆ.7 ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯವು ಹಮ್ಮಿಕೊಂಡಿದ್ದ ಶಿಕ್ಷಕ ಹಾಗೂ ಇಂಜಿನಿಯರ್ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು […]