ನಿಟ್ಟೆ ತಾಂತ್ರಿಕ ಕಾಲೇಜಿನ ಸಂಶೋಧಕರ ತಂಡದಿಂದ ಸ್ವಯಂಚಾಲಿತ ಬ್ಯಾಂಡ್ ಸಾ ಬ್ಲೇಡ್ ವೆಲ್ಡಿಂಗ್ ಯಂತ್ರ

ಕಾರ್ಕಳ: ನಿಟ್ಟೆಯ ಎನ್‌ಎಂಎಎಂ ತಾಂತ್ರಿಕ ಕಾಲೇಜಿನ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ‘ಸೆಂಟರ್ ಫಾರ್ ಸಿಸ್ಟಮ್ ಡಿಸೈನ್, ಫ್ಯಾಬ್ರಿಕೇಶನ್ & ಟೆಸ್ಟಿಂಗ್’ ಹಾಗೂ ‘ಎನ್‌ಎಂಎಎಂಐಟಿ ಫ್ರೋನಿಯಸ್ ಸೆಂಟರ್ ಫಾರ್ ವೆಲ್ಡಿಂಗ್ ಟೆಕ್ನಾಲಜಿ’ಯ ಸಂಶೋಧಕರ ತಂಡವು ಕಾರ್ಕಳದ ಸ್ಥಳೀಯ ಟಿಂಬರ್ ಉದ್ಯಮದ ನೆರವಿಗಾಗಿ ಸ್ವಯಂಚಾಲಿತ ಬ್ಯಾಂಡ್ ಸಾ ಬ್ಲೇಡ್ ವೆಲ್ಡಿಂಗ್ ಯಂತ್ರವೊಂದನ್ನು ಅಭಿವೃದ್ಧಿಪಡಿಸಿದೆ. ಮರದ ಕಾರ್ಖಾನೆಗಳಲ್ಲಿ ಮರದ ಹಲಿಗೆಗಳನ್ನು ಮಾಡುವ ಸಂದರ್ಭದಲ್ಲಿ ಸಾ ಬ್ಲೇಡ್‌ಗಳು ಮುರಿಯುವುದು ಸಾಮಾನ್ಯ. ಈ ಸಂದರ್ಭದಲ್ಲಿ ಕಾರ್ಕಳದ ಉದ್ಯಮಿಯು ಈ ಬ್ಲೇಡ್‌ಗಳನ್ನು ಮಂಗಳೂರಿಗೆ ಕೊಂಡೊಯ್ದು ಸರಿಪಡಿಸುವ […]