ನಿಟ್ಟೆ ತಾಂತ್ರಿಕ ಕಾಲೇಜಿಗೆ ಡೈಮಂಡ್ ರೇಟಿಂಗ್

ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಕ್ಯೂ.ಎಸ್.ಐ-ಗೇಜ್ ಭಾರತೀಯ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ಮೌಲ್ಯಾಂಕನದಲ್ಲಿ ಡೈಮಂಡ್ ರೇಟಿಂಗ್ ಪಡೆದುಕೊಂಡಿದೆ. ಕ್ಯೂ.ಎಸ್.ಐ-ಗೇಜ್ ಮೌಲ್ಯಾಂಕನವನ್ನು ಇಂಗ್ಲೆಂಡಿನ ಕ್ಯೂ.ಎಸ್.ಕ್ವಾಕರೆಲಿ ಸೈಮಂಡ್ಸ್ ಲಿಮಿಟೆಡ್ ಮತ್ತು ಭಾರತದ ಎರಾ ಫೌಂಡೇಶನ್ ಜಂಟಿಯಾಗಿ ನಡೆಸುತ್ತಾರೆ. ಕ್ಯೂ.ಎಸ್. ಕ್ವಾಕರೆಲಿ ಸೈಮಂಡ್ಸ್ ಲಿಮಿಟೆಡ್ ವಿಶ್ವಮಟ್ಟದಲ್ಲಿ ಗುರುತಿಸಲ್ಪಟ್ಟ ಅಂತಾರಾಷ್ಟ್ರೀಯ ಮೌಲ್ಯಾಂಕನ ಸಂಸ್ಥೆಯಾಗಿದೆ. ಕ್ಯೂ.ಎಸ್.ಐ-ಗೇಜ್ ಮೌಲ್ಯಾಂಕನವು ಒಟ್ಟು ೬ ಪ್ರಾಥಮಿಕ ಹಾಗೂ ೨ ದ್ವಿತೀಯ ಮಾನದಂಡಗಳ ಆಧಾರಿತ ಗುಣಮಟ್ಟದ ಮೌಲ್ಯಮಾಪನ ಪ್ರಕ್ರಿಯೆಯಾಗಿದೆ.  ಪ್ರಸ್ತುತ ಈವರೆಗಿನ ಕಾಲೇಜು ಮಟ್ಟದ ರೇಟಿಂಗ್‌ನಲ್ಲಿ […]