ಶ್ರೀನಿವಾಸ್ ಗೌಡ ದಾಖಲೆ ಉಡೀಸ್ ಮಾಡಿದ ನಿಶಾಂತ್ ಶೆಟ್ಟಿ: ಕಂಬಳ ಗದ್ದೆಯಲ್ಲಿ ಮತ್ತೊಬ್ಬ ಬೋಲ್ಟ್ ನ ಉದಯ

ಉಡುಪಿ: ಕಂಬಳ ಗದ್ದೆಯಲ್ಲಿ ಮತ್ತೊಬ್ಬ ಹುಸೇನ್ ಬೋಲ್ಟ್ ಉದಯವಾಗಿದ್ದು, ವೇಣೂರಿನಲ್ಲಿ ನಡೆದ ಸೂರ್ಯ ಚಂದ್ರ ಕಂಬಳದಲ್ಲಿ ಕಾರ್ಕಳ ತಾಲ್ಲೂಕಿನ ಬಜೆಗೋಳಿಯ ನಿವಾಸಿ ನಿಶಾಂತ್ ಶೆಟ್ಟಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಶ್ರೀನಿವಾಸ್ ಗೌಡ ಈಚೆಗೆ ಮೂಡುಬಿದಿರೆ ಮಿಜಾರಿನಲ್ಲಿ ನಡೆದ ಕಂಬಳದಲ್ಲಿ ಹೊಸ ದಾಖಲೆ ನಿರ್ಮಿಸಿದ್ದರು. ಆದರೆ ಇದೀಗ ಆ ದಾಖಲೆಯನ್ನು ನಿಶಾಂತ್ ಉಡೀಸ್ ಮಾಡಿದ್ದಾರೆ. ವೇಣೂರಿನಲ್ಲಿ ನಡೆದ ಕಂಬಳದಲ್ಲಿ ಶ್ರೀನಿವಾಸ ಗೌಡ 13.62 ಸೆಕೆಂಡ್ ನಲ್ಲಿ 142.5 ಮೀಟರ್ ಕ್ರಮಿಸಿದ್ದರು. ನಿಶಾಂತ್ 13.61 ಸೆಕೆಂಡ್ ನಲ್ಲಿ 143 ಮೀಟರ್ […]