ನಿಯಮ ಉಲ್ಲಂಘನೆ ವಾಹನ ಚಾಲಕರ ಲೈಸೆನ್ಸ್ ರದ್ದತಿಗೆ ಪ್ರಸ್ಥಾವನೆ, ಸರಕು ಸಾಗಾಟ ವಾಹನದಲ್ಲಿ ಮಾನವ ಸಾಗಾಟ

ಉಡುಪಿ: ಜಿಲ್ಲೆಯಲ್ಲಿ ಕಾನೂನು ಉಲ್ಲಂಘಿಸಿ ಶಾಲಾ ಮಕ್ಕಳನ್ನು ಸಾಗಿಸುತಿದ್ದ 51 ಶಾಲಾ ವಾಹನ, ಮಾನವರನ್ನು ಸಾಗಿಸುತಿದ್ದ 100 ಸರಕು ಸಾಗಾಟ ವಾಹನಗಳ ಮೇಲೆ ಕೇಸು ದಾಖಲಿಸಿ ದಂಡ ವಿಧಿಸಲಾಗಿದ್ದು, ಮೂರು ತಿಂಗಳಮಟ್ಟಿಗೆ ಚಾಲಕರ ಪರವಾನಿಗೆ ಲೈಸೆನ್ಸ್ ರದ್ಧತಿಗೆ ಆರ್‌ಟಿಒಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ತಿಳಿಸಿದ್ದಾರೆ. ಶುಕ್ರವಾರ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ನಡೆದ ಎಸ್‌ಪಿ ಫೋನ್ ಇನ್ ಕಾರ್ಯಕ್ರಮದಲ್ಲಿ ಈ ಕುರಿತು ಸಾರ್ವಜನಿಕರು ಮನವಿ ಮಾಡಿದರು. ರಿಕ್ಷಾದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ […]
ಮಹಿಳೆಯರ ಸುರಕ್ಷತೆಗಾಗಿ ರಾಣಿ ಅಬ್ಬಕ್ಕ ಪಡೆ ರಚನೆ

ಉಡುಪಿ: ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಹಿಳೆಯರ ಸುರಕ್ಷತೆಗಾಗಿ ರಾಣಿ ಅಬ್ಬಕ್ಕ ಪಡೆ ರಚಿಸಲಾಗಿದ್ದು, ಎಸ್ಪಿ ನಿಶಾ ಜೇಮ್ಸ್ ಅವರು ಇಂದು ಉದ್ಘಾಟಿಸಿದರು. ಈ ಪಡೆಯು ಶಾಲಾ ಕಾಲೇಜು ಪರಿಸರದಲ್ಲಿ ಅಸಭ್ಯ ವರ್ತನೆ ಮಾಡುವವರ ವಿರುದ್ಧ ಕ್ರಮದ ಜತೆಗೆ ಮೋಟಾರು ವಾಹನ ತಪಾಸಣೆ, ಕೋಟ್ಪಾ, ಪಿಟ್ಟಿ ಕೇಸ್, ಗಂಭೀರ ಪ್ರಕರಣಕ್ಕೆ ಕ್ರಿಮಿನಲ್ ಕೇಸ್ ದಾಖಲಿಸಿಕೊಂಡು ಮಹಿಳಾ ಸುರಕ್ಷಿತೆಗೆ ಹೆಚ್ಚಿನ ಆದ್ಯತೆ ನೀಡಲಿದೆ. ಉಡುಪಿ ನಗರ, ಮಣಿಪಾಲ ಸುತ್ತಲಿನ ಪರಿಸರದಲ್ಲಿ ಕಾರ್ಯಾಚರಣೆ ಮಾಡಲಿದೆ. ಬಳಿಕ ಮಾತನಾಡಿದ ಎಸ್ಪಿ ನಿಶಾ ಜೇಮ್ಸ್ ಅವರು, ಉಡುಪಿ ನಗರ […]