ನೀಲಾವರ: ಮರ ಬಿದ್ದು ರಸ್ತೆ ಸಂಚಾರ ಸ್ಥಗಿತ
ನೀಲಾವರ: ನೀಲಾವರ ಕ್ರಾಸ್ ಹೆಬ್ಬಲಸಿನ ಕಟ್ಟೆ ಹತ್ತಿರ ವಿದ್ಯುತ್ ಕಂಬಗಳ ಮೇಲೆ ಬೃಹತ್ ಮರವೊಂದು ಉರುಳಿಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದ್ದು, ಇದರಿಂದ ಇಂದು (ಆ.28) ಹಾಗೂ ನಾಳೆ (ಆ.29) ಮಧ್ಯಾಹ್ನದವರೆಗೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಬದಲಿ ಮಾರ್ಗವಾಗಿ ನೀರಾವರ ಗುಡ್ಡೆಯಿಂದ ಗ್ರಾಮಪಂಚಾಯತ್ ಸಮೀಪದ ರಸ್ತೆಯಲ್ಲಿ ಸಂಚಾರಕ್ಕೆ ಅವಕಾಶವಿರುತ್ತದೆ. ಗ್ರಾಮಸ್ಥರು ಸಹಕರಿಸಬೇಕಾಗಿ ಗ್ರಾಪಂ ವಿನಂತಿಸಿಕೊಂಡಿದೆ.