ನಿಖಿತಾ ಸಾವಿಗೆ ಆಸ್ಪತ್ರೆಯ ಸ್ಪಂದನೆ: ಕುಟುಂಬಕ್ಕೆ 20 ಲ.ರೂ ಸಾಂತ್ವನ ಧನ ಹಸ್ತಾಂತರ
ಉಡುಪಿ: ಆರೋಗ್ಯ ಸಮಸ್ಯೆಯಿಂದಾಗಿ ಇಲ್ಲಿನ ಖಾಸಗಿ ಆಸ್ಪತೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದ ನಿಖಿತಾ ಸಾವಿಗೆ ಜಿಲ್ಲಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು ಮತ್ತು ಆಸ್ಪತ್ರೆಯ ವಿರುದ್ದ ಪ್ರತಿಭಟನೆಗಳನ್ನು ನಡೆಸಿ ಹೋರಾಟ ನಡೆಸಲಾಗಿತ್ತು. ಇದೀಗ ನಿಖಿತಾ ಸಾವಿಗೆ ಖೇದ ವ್ಯಕ್ತಪಡಿಸಿರುವ ಆಸ್ಪತ್ರೆಯ ಆಡಳಿತ ಮಂಡಳಿಯು 20 ಲಕ್ಷ ರೂ ಗಳನ್ನು ಸಾಂತ್ವನ ಧನ ಪರಿಹಾರವಾಗಿ ನಿಖಿತಾ ಕುಟುಂಬಕ್ಕೆ ಹಸ್ತಾಂತರಿಸಿ ಮಾನವೀಯತೆ ಮೆರೆದಿದೆ. ಜಿಲ್ಲೆಯ ಎಲ್ಲಾ ಕುಲಾಲ ಸಮುದಾಯ ಸಂಘಟನೆಗಳ ನೇತೃತ್ವದಲ್ಲಿ ಪ್ರಜ್ಞಾವಂತ ನಾಗರಿಕರು ನಡೆಸಿದ ಹೋರಾಟಕ್ಕೆ ಸಂದ ಜಯ ಇದಾಗಿದ್ದು, […]