ನಿಫ್ಟಿ 51, ಸೆನ್ಸೆಕ್ಸ್ 173 ಪಾಯಿಂಟ್ ಏರಿಕೆ

ಮುಂಬೈ: ಭಾರತದ ಷೇರು ಮಾರುಕಟ್ಟೆಗಳು ಏರಿಕೆಯೊಂದಿಗೆ ಬುಧವಾರದ ವಹಿವಾಟು ಕೊನೆಗೊಳಿಸಿವೆ.30 ಷೇರುಗಳ ಬಿಎಸ್‌ಇ ಸೆನ್ಸೆಕ್ಸ್ 173.22 ಪಾಯಿಂಟ್ ಅಥವಾ ಶೇಕಡಾ 0.26 ರಷ್ಟು ಏರಿಕೆ ಕಂಡು 66,118.69 ಕ್ಕೆ ತಲುಪಿದೆ. ಸೂಚ್ಯಂಕವು ಬೆಳಗಿನ ವಹಿವಾಟಿನಲ್ಲಿ 65,549.96 ಕ್ಕೆ ಇಳಿದಿತ್ತು. ಆದಾಗ್ಯೂ, ರಿಲಯನ್ಸ್, ಎಲ್ &ಟಿ, ಇನ್ಫೋಸಿಸ್ ಮತ್ತು ಮಾರುತಿ ಷೇರುಗಳ ಖರೀದಿಯಲ್ಲಿನ ಹೆಚ್ಚಳವು ನಷ್ಟ ತುಂಬಲು ಸಹಾಯ ಮಾಡಿತು. ನಂತರ ಸೆನ್ಸೆಕ್ಸ್ ದಿನದ ವಹಿವಾಟಿನಲ್ಲಿ 226.8 ಪಾಯಿಂಟ್ ಅಥವಾ ಶೇಕಡಾ 0.34 ರಷ್ಟು ಏರಿಕೆಯಾಗಿ 66,172.27 ಕ್ಕೆ […]