19,300ಕ್ಕಿಂತ ಕೆಳಗಿಳಿದ ನಿಫ್ಟಿ: ಬಿಎಸ್ಇ ಸೆನ್ಸೆಕ್ಸ್ 365 ಪಾಯಿಂಟ್ ಕುಸಿತ

ಮುಂಬೈ : ಭಾರತದ ಷೇರು ಮಾರುಕಟ್ಟೆಗಳು ಇಂದು (ಶುಕ್ರವಾರ) ಇಳಿಕೆಯೊಂದಿಗೆ ವಹಿವಾಟು ಕೊನೆಗೊಳಿಸಿವೆ. ಸೆನ್ಸೆಕ್ಸ್ನಲ್ಲಿ ಲಾರ್ಸೆನ್ ಆಂಡ್ ಟರ್ಬೋ, ಜೆಎಸ್ಡಬ್ಲ್ಯೂ ಸ್ಟೀಲ್, ಇಂಡಸ್‌ಇಂಡ್ ಬ್ಯಾಂಕ್, ಪವರ್ ಗ್ರಿಡ್, ಐಟಿಸಿ, ಮಹೀಂದ್ರಾ & ಮಹೀಂದ್ರಾ, ಎನ್ಟಿಪಿಸಿ, ಎಚ್ಡಿಎಫ್ಸಿ ಬ್ಯಾಂಕ್, ಐಟಿಸಿ, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟಾಟಾ ಮೋಟಾರ್ಸ್ ಪ್ರಮುಖವಾಗಿ ಕುಸಿತ ಕಂಡವು.ದೇಶೀಯ ಬೆಂಚ್ ಮಾರ್ಕ್ ಬಿಎಸ್ಇ ಸೆನ್ಸೆಕ್ಸ್ 365 ಪಾಯಿಂಟ್‌ಗಳಷ್ಟು ಕುಸಿದಿದೆ ಮತ್ತು ನಿಫ್ಟಿ ಶುಕ್ರವಾರದ ಅಸ್ಥಿರ ವಹಿವಾಟಿನಲ್ಲಿ 19,300 ಮಟ್ಟಕ್ಕಿಂತ ಕೆಳಗಿಳಿದಿದೆ.ಶುಕ್ರವಾರದ ವಹಿವಾಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆಗಳು […]