ಪ್ರಾಚೀನ ಭಾರತದ ನಳಂದವೇ ಬೌದ್ಧ ಜ್ಞಾನದ ಪ್ರಮುಖ ಕೇಂದ್ರವಾಗಿತ್ತು: ನಿಕೋಲಸ್ ವ್ರೀಲ್ಯಾಂಡ್
ಮಣಿಪಾಲ: ಟಿಬೆಟಿಗೆ ಬೌದ್ಧ ಧರ್ಮವು ಜೀವನದ ಸಂಕೋಲೆಗಳಿಂದ ಮುಕ್ತಿ ಮತ್ತು ಜ್ಞಾನದ ಸಂದೇಶವನ್ನು ಹೊತ್ತು ಭಾರತದಿಂದಲೇ ವಿಸ್ತರಿಸಿದೆ. ಪ್ರಾಚೀನ ಭಾರತದ ನಳಂದವೇ ಬೌದ್ಧ ಜ್ಞಾನದ ಪ್ರಮುಖ ಕೇಂದ್ರವಾಗಿತ್ತು ಮತ್ತು ಪದ್ಮಸಂಭವ ಅಲ್ಲಿನ ಬೌದ್ಧ ಧರ್ಮಗುರುವಾಗಿ ಟಿಬೆಟ್ ನಲ್ಲಿ ಬೌದ್ಧಧರ್ಮವನ್ನು ವಿಸ್ತರಿಸಿದರು ಎಂದು ನಂಬಲಾಗಿದೆ. ತಾತ್ವಿಕವಾಗಿ, ಬೌದ್ಧಧರ್ಮವು ಪರಿಸರಾತ್ಮಕ ದೃಷಿಕೋನ ಮತ್ತು ಜೀವನ ವಿಧಾನವನ್ನು ಪ್ರತಿಪಾದಿಸುತ್ತದೆ ಮತ್ತು ಪ್ರಸ್ತುತ ನಡೆಯುತ್ತಿರುವ COP27 ಸಮ್ಮೇಳನದ ತತ್ವ ಗಳನ್ನು ಒಳಗೊಂಡಂತೆ ಜಗತ್ತನ್ನು ಪ್ರಾಕೃತಿಕ ಸುಸ್ಥಿರತೆಯತ್ತ ಕೊಂಡೊಯ್ಯುವ ಪ್ರಯತ್ನಗಳಿಗೆ ಇದೊಂದು ದಾರಿಯಾಗಿದೆ ಎಂದು […]