ಹೆಬ್ರಿ-ಪರ್ಕಳ ಹೆದ್ದಾರಿಗಾಗಿ ಸಾಂಪ್ರದಾಯಿಕ ಮರಗಳ ಹನನ: ಪರಿಸರ ಪ್ರೇಮಿಗಳಿಂದ ಆಕ್ಷೇಪಣೆ

ಉಡುಪಿ: ಹೆಬ್ರಿ-ಪರ್ಕಳ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಾಗಿ ಮರಗಳನ್ನು ತೆರವುಗೊಳಿಸುವ ಪ್ರಕ್ರಿಯೆಗೆ ಪರಿಸರ ಪ್ರೇಮಿಗಳು ಆಕ್ಷೇಪ ವ್ಯಕ್ತ ಪಡಿಸಿದ್ದಾರೆ. ಪಶ್ಚಿಮ ಘಟ್ಟಗಳಂತಹ ಸೂಕ್ಷ್ಮ ಪ್ರದೇಶದ ಜೀವ ವೈವಿಧ್ಯಕ್ಕೆ ಮಾರಕವಾಗುತ್ತಿರುವ ಅಭಿವೃದ್ದಿ ಕಾರ್ಯಗಳ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಪಶ್ಚಿಮ ಘಟ್ಟಗಳ ಹಸುರು ನುಂಗಲು ಹೊರಟಿದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೆಬ್ರಿಯಿಂದ ಪರ್ಕಳದ ವರೆಗೆ ಚತುಷ್ಪಥ ಹೆದ್ದಾರಿಯ ಹೆಸರಿನಲ್ಲಿ ಸಾವಿರಾರು ಬಲಿತ ಪಾರಂಪರಿಕ ಮರಗಳನ್ನು ಕಡಿಯಲು ಮುಂದಾಗಿದೆ. ಮರ ಕಡಿತಲೆಗೆ ಸಂಬಂಧಿಸಿದ ಕಾನೂನು ನಿಯಮಗಳನ್ನು ಮೀರಿ ತನ್ನ ಲಾಭದ […]