2019 ವಿಶ್ವಕಪ್: ನ್ಯೂಜಿಲೆಂಡ್- ಇಂಗ್ಲೆಂಡ್ ಫೈನಲ್ ಕದನ, ವಿಶ್ವಕಪ್ ನಿಂದ ಹೊರಬಿದ್ದ ಬಲಿಷ್ಠ ತಂಡಗಳು

ಬರ್ಮಿಂಗ್ಹ್ಯಾಂ: 2019ರ ವಿಶ್ವಕಪ್ ನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಅಚ್ಚರಿಯ ಫಲಿತಾಂಶದಿಂದ ಹೊರಬಿದ್ದ ಬೆನ್ನಲ್ಲೇ ಗುರುವಾರದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಬಲಿಷ್ಠ ಆಸ್ಟ್ರೇಲಿಯಾ ತಂಡವೂ ಹೊರಬಿದ್ದಿದೆ. ಆ ಮೂಲಕ ಲೀಗ್ ಹಂತದ ಪಂದ್ಯಗಳಲ್ಲಿ ಅದ್ಬುತ ಪ್ರದರ್ಶನ ನೀಡಿ ಪಾಯಿಂಟ್ ಟೇಬಲ್ ನಲ್ಲಿ ಮೊದಲೆರಡು ಸ್ಥಾನಗಳನ್ನು ಅಲಂಕರಿಸಿದ್ದ, 2011ರ ವಿಶ್ವಕಪ್ ಚ್ಯಾಂಪಿಯನ್ ಭಾರತ ಹಾಗೂ 2015 ಚ್ಯಾಂಪಿಯನ್ ಆಸ್ಟ್ರೇಲಿಯಾ ತಂಡಗಳ ವಿಶ್ವಕಪ್ ಆಸೆ ಕಮರಿಹೋಗಿದೆ. ಹೀಗಾಗಿ ಲೀಗ್ ಹಂತದಲ್ಲಿ‌ ಸಾಧಾರಣ ಪ್ರದರ್ಶನ […]