ಉಡುಪಿ ಜಿಲ್ಲೆಯಲ್ಲಿ ಮುಂದುವರೆದ ಮಳೆ ಆರ್ಭಟ : ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಉಡುಪಿ: ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗುತ್ತಿರುವುದರಿಂದ, ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂದಿನ ಎರಡು ದಿನಗಳ ಕಾಲ ಹೆಚ್ಚಿನ ಮಳೆಯಾಗುವುದರಿಂದ, ಮುಂಜಾಗ್ರತಾ ಕ್ರಮವಾಗಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ  ಜುಲೈ 6ರಂದು  ಉಡುಪಿ ಜಿಲ್ಲೆಯ ಅಂಗನವಾಡಿ, ಸರಕಾರಿ ಖಾಸಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮತ್ತು ಪದವಿ ಪೂರ್ವ, ಪದವಿ ಕಾಲೇಜುಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಕೂರ್ಮರಾವ್ ಆದೇಶ ಹೊರಡಿಸಿದ್ದಾರೆ

ಉಡುಪಿ: ಪುನರ್ವಸತಿ ಕೇಂದ್ರದ ನಿವಾಸಿಗಳಿಗೆ ಬಟ್ಟೆ ವಿತರಣೆ

ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿಯಿಂದ ಪುರ್ನವಸತಿ ಕೇಂದ್ರದ ನಿವಾಸಿಗಳಿಗೆ, ಬಟ್ಟೆಯನ್ನು ಮಂಗಳವಾರ ಉಚಿತವಾಗಿ ವಿತರಿಸಲಾಯಿತು. ವಲಸೆ ಕಾರ್ಮಿಕರು, ವಾಹನದ ಸೌಕರ್ಯ ಇಲ್ಲದೆ ಊರಿಗೆ ಹೋಗಲಾಗದೆ ಉಡುಪಿಯಲ್ಲಿ ಉಳಿದು ಕೊಂಡಿದ್ದಾರೆ. ಅವರನ್ನು ಬೊರ್ಡ್ ಹೈಸ್ಕೂಲು- ಇಲ್ಲಿ ತಾತಾಕ್ಕಲಿವಾಗಿ ಸ್ಥಾಪಿಸಲಾಗಿರುವ ವಲಸೆ ಕಾರ್ಮಿಕರ ಪುರ್ನವಸತಿ ಕೇಂದ್ರದಲ್ಲಿ ನೆಲೆ ಕಲ್ಪಿಸಲಾಗಿದೆ. ಉಡುಪಿ ಜಿಲ್ಲಾ ನಾಗರಿಕ ಸಮಿತಿಯು, ಅವರಿಗೆಲ್ಲರಿಗೂ ಉಚಿತವಾಗಿ ಬಟ್ಟೆಯನ್ನು ವಿತರಿಸಿತು.  ಬಟ್ಟೆಯನ್ನು ನಗರಸಭೆ ಪೌರಾಯುಕ್ತ ಆನಂದ್ ಕಲ್ಲೊಳಿಕರ್ ವಿತರಣೆ ಮಾಡಿದರು. ಪಾಟೀಲ್ ಕ್ಲೋತ್ ಸ್ಟೋರ್ ಪರ್ಕಳ ಇವರು ಬಟ್ಟೆಗಳನ್ನು […]