ಮಂಗಳೂರು: ಬ್ಯಾರಿ ಭವನಕ್ಕೆ ರಾಜ್ಯ ಸರಕಾರದಿಂದ 6 ಕೋ.ರೂ.: ರಹೀಂ ಉಚ್ಚಿಲ್

ಮಂಗಳೂರು: ಮಂಗಳೂರಿನ ನೀರುಮಾರ್ಗದ ಬೈತುರ್ಲಿ ಎಂಬಲ್ಲಿ ಬ್ಯಾರಿ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ 6 ಕೋ.ರೂ. ಅನುದಾನ ಮಂಜೂರಾತಿ ಮಾಡಿದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಹೇಳಿದರು ಮಂಗಳೂರಿನಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ  ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಬ್ಯಾರಿ ಭವನ ನಿರ್ಮಾಣಕ್ಕೆ ಹಲವು ವರ್ಷಗಳಿಂದ ಬೇಡಿಕೆಯಿಡಲಾಗುತ್ತಿತ್ತು. ಆದರೆ ಬ್ಯಾರಿ ಭವನದ ಬೇಡಿಕೆಯನ್ನು ಯಾವ ಸರ್ಕಾರವೂ ಈಡೇರಿಸಿರಲಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪ್ರಸ್ತಾವನೆ ಸಲ್ಲಿಸಿದಾಗ ಅವರು ಆರು […]