ಖ್ಯಾತ ನ್ಯೂಸ್ ಆ್ಯಂಕರ್ ರೋಹಿತ್ ಸರ್ದಾನ ಇನ್ನಿಲ್ಲ

ನವದೆಹಲಿ: ಕೊರೊನಾ ಸೋಂಕಿನ ಕಾರಣದಿಂದ ಚಿಕಿತ್ಸೆ ಪಡೆಯುತ್ತಿದ್ದ ಆಜ್​ ತಕ್ ಹಿಂದಿ ಚಾನೆಲ್​ನ ಖ್ಯಾತ ಆ್ಯಂಕರ್ ರೋಹಿತ್ ಸರ್ದಾನಾ, ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ರೋಹಿತ್ ಅವರ ಸಾವಿನ ಸುದ್ದಿ‌ಯ ಬಗ್ಗೆ ಝಿ ಟಿವಿಯ ಪ್ರಧಾನ ಸಂಪಾದಕ ಸುಧೀರ್ ಚೌದ್ರಿ ಟ್ವೀಟ್ ಮಾಡಿದ್ದಾರೆ. ಸರ್ದಾನಾ ಸಾವಿನ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಪತ್ರಕರ್ತ ರಾಜದೀಪ್ ದೇಸಾಯಿ, ಇದು ಅತ್ಯಂತ ಆಘಾತಕಾರಿ ವಿಷಯ ಎಂದಿದ್ದಾರೆ. ಏಪ್ರಿಲ್ 24ಕ್ಕೆ ಟ್ವೀಟ್ ಮಾಡಿದ್ದ ರೋಹಿತ್ ಸರ್ದಾನಾ ತಮಗೆ ಕೋವಿಡ್ ಪಾಸಿಟಿವ್ ಬಂದಿರೋದಾಗಿ ತಿಳಿಸಿದ್ದರು. […]