ಇನ್ನೂ ಜಗತ್ತನ್ನೇ ನೋಡದ ನನ್ನ ಗರ್ಭದಲ್ಲಿರುವ ಕಂದಮ್ಮನನ್ನು ಕೊಂದು ಬಿಟ್ಟೆಯಲ್ಲಾ!

ಗರ್ಭ ಧರಿಸಿದ ಆನೆಯೊಂದು ಮನುಷ್ಯನ ದುಷ್ಟ ಕೃತ್ಯಕ್ಕೆ ಬಲಿಯಾದ ಘಟನೆ ದೇಶವನ್ನೇ ಕಲಕುತ್ತಿದೆ.ಅನಾನಾಸ್ ನಲ್ಲಿ ಪಟಾಕಿ ಇಟ್ಟು ಆನೆಯನ್ನು ಸಾಯಿಸಿದ ದುಷ್ಟರ ಬಗ್ಗೆ ಸಹೃದಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಇಡೀ ಘಟನೆ ಮಾನವರಿಂದ ಮುಗ್ದ ಪ್ರಾಣಿಗಳು ಹೇಗೆ ಸಂಘರ್ಷಕ್ಕೊಳಗಾಗುತ್ತವೆ ಎನ್ನುವುದಕ್ಕೆ ಕನ್ನಡಿ ಹಿಡಿದಿದೆ. ಬರಹಗಾರ್ತಿ ಜಯಾ ಬಿ ಬರೆದ ಬರಹವನ್ನೊಮ್ಮೆ ಓದಿ. ಈ ಬರಹ ನಿಜಕ್ಕೂ ಕಣ್ಣಂಚಿನಲ್ಲಿ ನೀರು ಭರಿಸುತ್ತದೆ.ಯಾವ ಮುಗ್ದ ಪ್ರಾಣಿಗಳನ್ನು ಇನ್ನು ಮುಂದೆ ನಾವು ಬಲಿ ತಗೊಳಲ್ಲ ಎನ್ನುವ ಪ್ರತಿಜ್ಞೆ ಮಾಡೋಣ ಕ್ಷಮಿಸಿ ಬಿಡು […]

ಹನಿಟ್ರ್ಯಾಪ್ ಖೆಡ್ಡಾಕ್ಕೆ ಬಿದ್ದ ಕರಾವಳಿಯ ಶಾಸಕ..?

ಉಡುಪಿ: ಕರ್ನಾಟಕ ವಿಧಾನಸಭೆ ಉಪಚುನಾವಣೆ ಹೊಸ್ತಿಲಲ್ಲಿ ಜನಪ್ರತಿನಿಧಿಗಳ ಹನಿಟ್ರ್ಯಾಪ್ ಪ್ರಕರಣ ಭಾರೀ ಸದ್ದು ಮಾಡುತ್ತಿದ್ದು, ಈ ಜಾಲದಲ್ಲಿ ಕರಾವಳಿಯ ಶಾಸಕರೊಬ್ಬರು ಸಿಲುಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹನಿಟ್ರ್ಯಾಪ್ ಜಾಲದ ಬೆನ್ನು ಹತ್ತಿದ್ದ ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ಅಚ್ಚರಿಯ ಮಾಹಿತಿ ದೊರಕಿದ್ದು, ಉಪಚುನಾವಣೆಯಲ್ಲಿ ಕಣಕ್ಕಿಳಿದಿರುವ ಇಬ್ಬರು ಅನರ್ಹ ಶಾಸಕರು ಸೇರಿದಂತೆ ಒಟ್ಟು ಆರು ಮಂದಿ ಶಾಸಕರು ಹನಿಟ್ರ್ಯಾಪ್ ಬಲೆಗೆ ಬಿದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಈ ಆರು ಜನರ ಪೈಕಿ ಒಬ್ಬರು ವಿಧಾನ ಪರಿಷತ್ ಸದಸ್ಯ ಹಾಗೂ ಕರಾವಳಿಯ ಶಾಸಕರೊಬ್ಬರು […]

ಕಾನೂನುಗಳ ಸಮರ್ಪಕ ಅನುಷ್ಠಾನದಿಂದ ಸಮಾಜಿಕ‌ ಬದಲಾವಣೆ: ರಾಜಶೇಖರ್

ಉಡುಪಿ: ಭಾರತದಲ್ಲಿ ಸಂವಿಧಾನ ಸಾಮಾಜಿಕ ನ್ಯಾಯದ ಮೂಲವಾಗಿದೆ. ಆದ್ದರಿಂದ ಸಂವಿಧಾನಿಕ ಧ್ಯೇಯೋದ್ದೇಶಗಳು ಹಾಗೂ ಕಾನೂನುಗಳ ಸಮರ್ಪಕ ಅನುಷ್ಠಾನದಿಂದ ಸಾಮಾಜಿಕ ಬದಲಾವಣೆ ತರಬಹುದು ಎಂದು ಕೊಲ್ಲಾಪುರ ಶಿವಾಜಿ ವಿಶ್ವವಿದ್ಯಾಲಯದ ಕಾನೂನು ಪ್ರಾಧ್ಯಾಪಕ ರಾಜಶೇಖರ್‌ ಸೀತಾರಾಮನ್‌ ಮಲುಶ್ತೆ ಹೇಳಿದರು. ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಗುರುವಾರ ನಡೆದ ವಿದ್ಯಾರ್ಥಿ ಸಬಲೀಕರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾನೂನು ವಿದ್ಯಾರ್ಥಿಗಳು ಕಾನೂನು ವಿಷಯಗಳ ಕುರಿತು ಆಳವಾದ ಅಧ್ಯಯನ ಮಾಡಬೇಕು. ಕಾನೂನು ಪ್ರಕರಣಗಳ ವಸ್ತುಸ್ಥಿತಿಗೆ ಅನುಗುಣವಾಗಿರುವ ಕಾನೂನು ಉಪಬಂಧಗಳನ್ನು ತಿಳಿದುಕೊಳ್ಳಬೇಕು. ಆಗ ಮಾತ್ರ […]

ಸಹಕಾರಿ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಮಹತ್ತರವಾದದ್ದು: ಎಂ.ಎನ್‌. ರಾಜೇಂದ್ರ ಕುಮಾರ್

ಉಡುಪಿ: ಸಹಕಾರಿ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಮಹತ್ತರವಾಗಿದ್ದು, ಸದೃಢ ಆರ್ಥಿಕ ಸಮಾಜ ನಿರ್ಮಾಣ ಮತ್ತು ಅಭಿವೃದ್ಧಿಗಾಗಿ ಮಹಿಳೆಯರು ಇನ್ನಷ್ಟು ಪರಿಣಾಮಕಾರಿಯಾಗಿ ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ಅಧ್ಯಕ್ಷ ಡಾ. ಎಂ.ಎನ್‌. ರಾಜೇಂದ್ರ ಕುಮಾರ್‌ ಹೇಳಿದರು. 66ನೇ ಅಖಿಲ ಭಾರತ ಸಹಕಾರ ಸಪ್ತಾಹ ಅಂಗವಾಗಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್‌, ಉಡುಪಿ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳ ವಿವಿಧೋದ್ದೇಶ ಸಹಕಾರ ಸಂಘ, ಉಡುಪಿ ಮಹಿಳಾ ಗ್ರಾಹಕರ ವಿವಿಧೋದ್ದೇಶ ಸಹಕಾರ […]

ಶಾಂತಿಯುತ ಸಮಾಜ ನಿರ್ಮಾಣದಲ್ಲಿ ವಕೀಲರ ಪಾತ್ರ ಮುಖ್ಯ: ಕಾವೇರಿ

ಉಡುಪಿ: ಶಾಂತಿಯುತ ಸಮಾಜ ನಿರ್ಮಾಣದಲ್ಲಿ ವಕೀಲರ ಹಾಗೂ ಕಾನೂನು ವಿದ್ಯಾರ್ಥಿಗಳ ಪಾತ್ರ ಮಹತ್ತರವಾದುದು ಎಂದು ಉಡುಪಿಯ ಹಿರಿಯ ಸಿವಿಲ್‌ ನ್ಯಾಯಾಧೀಶೆ ಕಾವೇರಿ ಹೇಳಿದರು. ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಮಂಗಳವಾರ ನಡೆದ ಒಂದು ದೇಶ, ಒಂದು ಸಂವಿಧಾನ- ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ದುಷ್ಟ ಶಕ್ತಿಗಳ ವಿರುದ್ಧ ಹೋರಾಡಿ ನ್ಯಾಯ ದೊರಕಿಸಿ ಕೊಡುವ ಹಾಗೂ ನೆಲದ ಕಾನೂನನ್ನು ಎತ್ತಿಹಿಡಿಯುವ ಜವಾಬ್ದಾರಿ ವಕೀಲರ ಮೇಲಿದೆ ಎಂದರು. ಕಾನೂನು ಇಲಾಖೆಯ ಉಪಕಾರ್ಯದರ್ಶಿ ಉದಯ್‌ ಕುಮಾರ್‌ ಶೆಟ್ಟಿ ಮಾತನಾಡಿ, ಕಾನೂನು […]