ರೋಹಿತ್​ ಬಿರುಗಾಳಿ ಶತಕ, ವಿರಾಟ್​ ಕ್ಲಾಸ್​ ಬ್ಯಾಟಿಂಗ್​ಗೆ ಮಂಡಿಯೂರಿದ ಅಫ್ಘಾನಿಸ್ತಾನ​ : ಭಾರತಕ್ಕೆ 2ನೇ ಗೆಲುವು

ನವದೆಹಲಿ: ಹಿಟ್​ಮ್ಯಾನ್​ ರೋಹಿತ್​ ಶರ್ಮಾ ಬಿರುಗಾಳಿ ಶತಕ, ಚೇಸಿಂಗ್​ ಮಾಸ್ಟರ್​ ವಿರಾಟ್​ ಕೊಹ್ಲಿ ಅರ್ಧಶತಕದ ನೆರವಿನಿಂದ ಅಫ್ಘಾನಿಸ್ತಾನ ವಿರುದ್ಧ ಭಾರತ 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿತು.ಟಾಸ್​ ಗೆದ್ದು ಮೊದಲು ಬ್ಯಾಟ್​ ಮಾಡಿದ ಅಫ್ಘಾನಿಸ್ತಾನ ನಾಯಕ ಹಸ್ಮತುಲ್ಲಾ ಶಾಹಿದಿ, ಅಜ್ಮತುತ್ತಾ ಒಮರ್​ಜಾಯಿ ಅರ್ಧಶತಕಗಳ ನೆರವಿನಿಂದ ನಿಗದಿತ 50 ಓವರ್​ಗಳಲ್ಲಿ 272 ರನ್​ಗಳ ಸಾಧಾರಣ ಮೊತ್ತ ಪೇರಿಸಿತು. ಈ ಗುರಿ ಬೆನ್ನಟ್ಟಿದ ಭಾರತ ಸೊಗಸಾದ ಆಟವಾಡಿ 35 ಓವರ್​ಗಳಲ್ಲಿ 2 ವಿಕೆಟ್​ಗೆ 272 ರನ್​ ಗಳಿಸಿತು.ಅರುಣ್​ ಜೇಟ್ಲಿ ಮೈದಾನದಲ್ಲಿಂದು […]