ರಸ್ತೆ ಅಪಘಾತ ಗಾಯಾಳುಗಳಿಗೆ 1.5 ಲಕ್ಷ ರೂ. ನಗದುರಹಿತ ಚಿಕಿತ್ಸೆ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೊಸದಿಲ್ಲಿ : ಸರಕಾರವು ಮಾರ್ಚ್ ವೇಳೆಗೆ ರಸ್ತೆ ಅಪಘಾತಗಳಲ್ಲಿ ಗಾಯಾಳುಗಳಿಗೆ ನಗದುರಹಿತ ಚಿಕಿತ್ಸೆಯನ್ನು ಒದಗಿಸುವ ರಾಷ್ಟ್ರವ್ಯಾಪಿ ಯೋಜನೆಯನ್ನು ಆರಂಭಿಸಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿಯವರು ಬುಧವಾರ ಇಲ್ಲಿ ಪ್ರಕಟಿಸಿದರು. ಈ ಯೋಜನೆಯಡಿ ಗಾಯಾಳುಗಳು ಅಪಘಾತದ ಬಳಿಕ ಏಳು ದಿನಗಳ ಕಾಲ 1.5 ಲಕ್ಷ ರೂ.ವರೆಗೆ ನಗದುರಹಿತ ಚಿಕಿತ್ಸೆಯನ್ನು ಪಡೆಯಲಿದ್ದಾರೆ. ಯೋಜನೆಯು ಎಲ್ಲ ರೀತಿಗಳ ರಸ್ತೆಗಳಲ್ಲಿ ಮೋಟರ್ ವಾಹನಗಳಿಂದ ಉಂಟಾಗುವ ಅಪಘಾತಗಳನ್ನು ಒಳಗೊಂಡಿರಲಿದೆ. ಅಪಘಾತ ಸಂಭವಿಸಿದ 24 ಗಂಟೆಗಳಲ್ಲಿ ಪೋಲಿಸರಿಗೆ ಮಾಹಿತಿ ನೀಡುವುದು ಅಗತ್ಯವಾಗಿದೆ. ಹಿಟ್ ಆ್ಯಂಡ್ […]