ಕೆನಡಾ ಪ್ರಧಾನಿ ಟ್ರುಡೊ ವಿಮಾನದಲ್ಲಿನ ತಾಂತ್ರಿಕ ದೋಷ ನಿವಾರಣೆ; ಸ್ವದೇಶಕ್ಕೆ ವಾಪಾಸ್

ನವದೆಹಲಿ: ಕೆನಡಾದ ಪ್ರಧಾನ ಮಂತ್ರಿ ಕಚೇರಿಯ ಪತ್ರಿಕಾ ಕಾರ್ಯದರ್ಶಿ ಮೊಹಮ್ಮದ್ ಹುಸೇನ್ ಮಾಧ್ಯಮವೊಂದಕ್ಕೆ ಈ ಮಾಹಿತಿ ನೀಡಿದ್ದಾರೆ. ವಿಮಾನದಲ್ಲಿನ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಲಾಗಿದೆ ಮತ್ತು ಈಗ ವಿಮಾನ ಮತ್ತೆ ಹಾರಾಟ ನಡೆಸಬಹುದಾಗಿದೆ. ಕೆನಡಾದ ನಿಯೋಗ ಈ ವಿಮಾನದಲ್ಲಿ ಇಂದು ಮಧ್ಯಾಹ್ನ ಹೊರಡುವ ನಿರೀಕ್ಷೆಯಿದೆ ಎಂದು ಹುಸೇನ್ ತಿಳಿಸಿದರು.ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೋ ಮತ್ತು ಅವರ ನಿಯೋಗವು ಮಂಗಳವಾರ ಮಧ್ಯಾಹ್ನ ಸ್ವದೇಶಕ್ಕೆ ಪ್ರಯಾಣ ಬೆಳೆಸುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಕೆನಡಾ ಪ್ರಧಾನಿ ಇಂದು ಸ್ವದೇಶಕ್ಕೆ ಮರಳಲಿದ್ದಾರೆ ಎಂದು ಕೆನಡಾದ […]