ಬಸ್ ನಿಲ್ದಾಣದಲ್ಲಿ ನವಜಾತ ಶಿಶು ಪತ್ತೆ: ಮಗು ಪಡೆಯಲು ದಂಬಾಲು ಬಿದ್ದ ಜನತೆ!

ಚಾಮರಾಜನಗರ: ಖಾಸಗಿ ಬಸ್ ನಿಲ್ದಾಣದಲ್ಲಿ ನವಜಾತ ಗಂಡು ಮಗುವನ್ನು ಬ್ಯಾಗ್ ನಲ್ಲಿ ಬಿಟ್ಟು ಹೋಗಿರುವ ಮನಕಲಕುವ ಘಟನೆ ಭಾನುವಾರ (ಏಪ್ರಿಲ್ 24) ರಾತ್ರಿ ನಡೆದಿದ್ದು, ಮಗುವನ್ನು ಪಡೆಯಲು ಜನತೆ ದಂಬಾಲು ಬಿದ್ದಿರುವ ಬಗ್ಗೆ ವರದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಹನೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ಸುಮಾರು ಏಳು ದಿನಗಳ ಹಿಂದೆ ಜನಿಸಿರುವ ಹಸುಗೂಸೊಂದನ್ನು ಬಿಟ್ಟು ಹೋಗಲಾಗಿದೆ. ಯಾರೂ ಇಲ್ಲದ ಜಾಗದಲ್ಲಿ ಮಗು ಅಳುತ್ತಿದ್ದ ಶಬ್ದ ಕೇಳಿ ಬ್ಯಾಗ್ ಬಳಿ ಬಂದು ನೋಡಿದ ಸಾರ್ವಜನಿಕರಿಗೆ ಬ್ಯಾಗ್ ನೊಳಗೆ ನವಜಾತ ಗಂಡು […]