ಹಳೆಯ ವಾಹನಗಳ ವಿಲೇವಾರಿಗೆ ಹೊಸ ನೀತಿ ಘೋಷಣೆ
ನವದೆಹಲಿ: ಹಳೆಯ ವಾಹನಗಳ ವಿಲೇವಾರಿಗೆ ಬಜೆಟ್‌ನಲ್ಲಿ ಸ್ಕ್ರ್ಯಾಪಿಂಗ್ ಪಾಲಿಸಿ (ಹಳೆಯ ವಾಹನಗಳನ್ನು ಗುಜರಿಗೆ ನೀಡಲು ನೀತಿ) ಹೊಸ ನೀತಿ ಘೋಷಿಸಲಾಗಿದೆ. ಅದರಂತೆ ವೈಯಕ್ತಿಕ ವಾಹನಗಳಿಗೆ 20 ವರ್ಷಗಳ ಬಳಿಕ ಹಾಗೂ ವಾಣಿಜ್ಯ ವಾಹನಗಳಿಗೆ 15 ವರ್ಷಗಳ ಬಳಿಕ ಕ್ಷಮತಾ ಪರೀಕ್ಷೆ ನಡೆಸಲಾಗುತ್ತದೆ. ಮಾಲಿನ್ಯ ಕಡಿಮೆ ಮಾಡುವ, ತೈಲ ಆಮದು ಹೊರೆ ತಗ್ಗಿಸುವ ನಿಟ್ಟಿನಲ್ಲಿ ಹಾಗೂ ಪರಿಸರಸ್ನೇಹಿ ವಾಹನಗಳನ್ನು ಉತ್ತೇಜಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ವೇಳೆ […]