ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹುಟ್ಟೂರು ಎರಟಾಡಿ ವಿಷ್ಣುಮೂರ್ತಿ ದೇವರಿಗೆ ನೂತನ ರಥ, ಆವರಣ ಗೋಡೆ ಸಮರ್ಪಣೆ

ಕಡಬ: ಪದವಿಭೂಷಣ ಪುರಸ್ಕೃತ ಹಿರಿಯ ಸಂತ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಹುಟ್ಟೂರು ದ.ಕ‌ ಜಿಲ್ಲೆ ಕಡಬ ತಾಲೂಕು ಹಳೇನೇರಂಕಿ ಗ್ರಾಮದ ಎರಟಾಡಿ ಶ್ರೀ ವಿಷ್ಣುಮೂರ್ತಿ ದೇವರಿಗೆ ನೂತನವಾಗಿ ನಿರ್ಮಿಸಲಾಗಿರುವ ಚಂದ್ರಮಂಡಲ ರಥ ಹಾಗೂ ದೇವಾಲಯಕ್ಕೆ ನಿರ್ಮಿಸಲಾದ ಆವರಣಗೋಡೆಯ ಸಮರ್ಪಣೆ ಕಾರ್ಯಕ್ರಮಗಳು ಭಾನುವಾರ ಸೋಮವಾರ ನೆರವೇರಿತು. ರಾಜ್ಯ ಮುಜರಾಯಿ ಇಲಾಖೆಯ ಇಪ್ಪತ್ತು ಲಕ್ಷ ರೂ ಅನುದಾನ‌ ಹಾಗೂ ಭಕ್ತರ ನೆರವಿನಿಂದ ಈ ನಿರ್ಮಾಣಗಳು ನಡೆದಿವೆ. ಭಾನುವಾರ ಸಂಜೆ ರಾಜ್ಯ ಬಂದರು ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಮಂತ್ರಿ […]