ಪಾಣೆಮಂಗಳೂರು: ನೇತ್ರಾವತಿ ನದಿಯಲ್ಲಿ ಭಜರಂಗದಳ ಪ್ರಮುಖನ ಮೃತದೇಹ ಪತ್ತೆ
ಬಂಟ್ವಾಳ: ತಾಲೂಕಿನ ಪಾಣೆಮಂಗಳೂರು ನೇತ್ರಾವತಿ ನದಿಯಲ್ಲಿ ಭಜರಂಗದಳ ಕಲ್ಲಡ್ಕ ಪ್ರಖಂಡದ ಗೋ ರಕ್ಷಾ ಪ್ರಮುಖ್ ರಾಜೇಶ್ ಪೂಜಾರಿ (26) ಎಂಬವರ ಮೃತದೇಹ ಪತ್ತೆಯಾಗಿದೆ. ಪಾಣೆಮಂಗಳೂರಿನ ಹಳೆಯ ಸೇತುವೆಯ ಬಳಿ ನೇತ್ರಾವತಿ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಸೇತುವೆಯ ಮೇಲೆ ದ್ವಿಚಕ್ರವಾಹನ ಪತ್ತೆಯಾದ ಹಿನ್ನೆಲೆಯಲ್ಲಿ ಸಂಶಯಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಳಿಕ ಘಟನಾ ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರ ತಂಡವು ಆಗಮಿಸಿ ಶೋಧ ನಡೆಸಿದೆ. ಈ ಸಂದರ್ಭ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ರಾಜೇಶ್ ಪೂಜಾರಿ […]
ಬಂಟ್ವಾಳ: ನದಿಯಲ್ಲಿ ಈಜಲೆಂದು ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಮೃತ್ಯು
ಬಂಟ್ವಾಳ: ತಾಲೂಕಿನ ಬಿ.ಸಿ.ರೋಡ್ ಸಮೀಪದ ಬ್ರಹ್ಮರಕೂಟ್ಲು ಎಂಬಲ್ಲಿ ಶುಕ್ರವಾರ ಸಂಜೆ ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದ ಬಾಲಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ವರದಿಯಾಗಿದೆ. ಬಿ.ಸಿ.ರೋಡ್ ಕೈಕಂಬ ಪರ್ಲ್ಯ ಮದ್ದ ನಿವಾಸಿ ಜುನೈದ್ ಎಂಬವರ ಪುತ್ರ ಸಲ್ಮಾನ್ (15) ಮೃತಪಟ್ಟ ಬಾಲಕ. ಶುಕ್ರವಾರ ಶಾಲೆಗೆ ರಜೆ ಇದ್ದ ಕಾರಣ ನಾಲ್ಕು ಮಂದಿ ಗೆಳೆಯರು ಸಾಯಂಕಾಲ ಬ್ರಹ್ಮರಕೂಟ್ಲು ಬಂಟರ ಭವನದ ಬಳಿ ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದರು. ಈಜುತ್ತಿದ್ದ ವೇಳೆ ಸಲ್ಮಾನ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಮೃತ […]