ಮೌಂಟ್ ಎವರೆಸ್ಟ್ ಬಳಿ ಐವರ ದುರ್ಮರಣ: ಹೆಲಿಕಾಪ್ಟರ್ ಪತನ..
ಕಠ್ಮಂಡು(ನೇಪಾಳ):ಹೆಲಿಕಾಪ್ಟರ್ ಪೂರ್ವ ನೇಪಾಳದ ಲಮ್ಜುರಾ ಪ್ರದೇಶದಲ್ಲಿ ಪತನಗೊಂಡಿದ್ದು, ಐವರ ಮೃತದೇಹಗಳು ಪತ್ತೆಯಾಗಿವೆ ಎಂದು ಸರ್ಕಾರಿ ಆಡಳಿತಾಧಿಕಾರಿ ಬಸಂತ ಭಟ್ಟರಾಯ್ ತಿಳಿಸಿದ್ದಾರೆ. ನೇಪಾಳದ ಮೌಂಟ್ ಎವರೆಸ್ಟ್ ಬಳಿ ಮನಂಗ್ ಏರ್‌ನ ಹೆಲಿಕಾಪ್ಟರ್ ಇಂದು ಬೆಳಗ್ಗೆ ನಾಪತ್ತೆಯಾಗಿತ್ತು. ಹೆಲಿಕಾಪ್ಟರ್‌ನಲ್ಲಿ ಆರು ಮಂದಿ (ಐವರು ಪ್ರಯಾಣಿಕರು + ಕ್ಯಾಪ್ಟನ್) ಇದ್ದರು. ವಿದೇಶಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಖಾಸಗಿ ವಾಣಿಜ್ಯ ಹೆಲಿಕಾಪ್ಟರ್ ಇಂದು ನೇಪಾಳದ ಮೌಂಟ್ ಎವರೆಸ್ಟ್ ಬಳಿ ಅಪಘಾತಕ್ಕೀಡಾಗಿ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ. ಮೌಂಟ್ ಎವರೆಸ್ಟ್ ಪರ್ವತದ ಸಮೀಪ ಮಂಗಳವಾರ ಬೆಳಗ್ಗೆ ಸಂಭವಿಸಿದ […]