ನೀರೆಬೈಲೂರು: ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು

ಬೈಲೂರು: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಘಟನೆ ಕಾರ್ಕಳದ ನೀರೆ ಬೈಲೂರಿನ ಬಾದಾಮಿ ಕಟ್ಟೆಯ ಸಮೀಪ ಜ.20 ರಂದು ಸಂಜೆ ವೇಳೆ ನಡೆದಿದೆ. ಕಾರು ಹಿರಿಯಡಕದಿಂದ ಬೈಲೂರಿನ ಕಡೆಗೆ ಬರುತ್ತಿದ್ದು, ಈ ವೇಳೆ ಗುಡ್ಡೆಯಂಗಡಿಯ ಬಾದಾಮಿ ಕಟ್ಟೆ ಬಳಿ ಬರುವಾಗ ಒಮ್ಮೇಲೆ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ರಸ್ತೆಯ ಬದಿಯ ಮರಕ್ಕೆ ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ಮೂವರಲ್ಲಿ ಒಬ್ಬರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.