ವಿಜಯ್ ಮಲ್ಯ ಮತ್ತು ನೀರವ್ ಮೋದಿ ಹಸ್ತಾಂತರವನ್ನು ತ್ವರಿತಗೊಳಿಸಿ: ಯುಕೆ ಅಧಿಕಾರಿಗಳಿಗೆ ಭಾರತ ತಾಕೀತು
ನವದೆಹಲಿ: ಭಾರತದ ಕಾನೂನು ಜಾರಿ ಅಧಿಕಾರಿಗಳು ದ್ವಿಪಕ್ಷೀಯ ಸಭೆಯಲ್ಲಿ ಭೂಗತ ಪಾತಕಿ ಇಕ್ಬಾಲ್ ಮಿರ್ಚಿ ಅವರ ಪತ್ನಿ ಹಜ್ರಾ ಮೆಮನ್ ಮತ್ತು ಅವರ ಪುತ್ರರಾದ ಆಸಿಫ್ ಮತ್ತು ಜುನೈದ್ ಸೇರಿದಂತೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ಹಸ್ತಾಂತರವನ್ನು “ತ್ವರಿತಗೊಳಿಸುವಂತೆ” ಯುಕೆ ಅಧಿಕಾರಿಗಳನ್ನು ಕೇಳಿಕೊಂಡಿದ್ದಾರೆ ಎಂದು ವರದಿಯಾಗಿದೆ. ಮಲ್ಯ ಅವರ ಹಸ್ತಾಂತರವನ್ನು ಯುಕೆ ಹೈಕೋರ್ಟ್ ಏಪ್ರಿಲ್ 2020 ರಲ್ಲಿ ತೆರವುಗೊಳಿಸಿದೆ. ಆದರೆ ಅಜ್ಞಾತವಾದ ಯಾವುದೋ “ರಹಸ್ಯ ಪ್ರಕ್ರಿಯೆಗಳಿಂದ” ಎರಡೂವರೆ ವರ್ಷಗಳ ಕಾಲದಿಂದ ಹಸ್ತಾಂತರ ಪ್ರಕ್ರಿಯೆ ವಿಳಂಬವಾಗುತ್ತಿದೆ. ಯುಕೆ […]