ಅಮೇರಿಕಾದ ಒರೆಗಾನ್‌ನಲ್ಲಿ ಚೊಚ್ಚಲ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆದ ನೀರಜ್ ಚೋಪ್ರಾ
ಅಮೇರಿಕಾದ ಒರೆಗಾನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಪುರುಷರ ಜಾವೆಲಿನ್ ಥ್ರೋ ನಲ್ಲಿ 88.39 ಮೀಟರ್‌ಗಳ ಎಸೆತದೊಂದಿಗೆ ಭಾರತ ನೀರಜ್ ಚೋಪ್ರಾ ಫೈನಲ್ ಗೆ ಅರ್ಹತೆ ಪಡೆದಿದ್ದಾರೆ. ಒಲಿಂಪಿಕ್ ಚಿನ್ನದ ಪದಕ ವಿಜೇತ ಚೋಪ್ರಾ, ಅರ್ಹತಾ ಸುತ್ತಿನ ಮೊದಲ ಎಸೆತದಲ್ಲೇ ಫೈನಲ್‌ನ ತಮ್ಮ ಸ್ಥಾನವನ್ನು ಭದ್ರಪಡಿಸಿದ್ದಾರೆ. ಅರ್ಹತಾ ಸುತ್ತಿನ ಎ ಗುಂಪಿನಲ್ಲಿ ಚೋಪ್ರಾ ಮೊದಲಿಗರಾಗಿ ಜಾವಲಿನ್ ಎಸೆದಿದ್ದಾರೆ. ನಾಳೆ ಮುಂಜಾನೆ ನಡೆಯಲಿರುವ ಫೈನಲ್‌ನಲ್ಲಿ 24 ವರ್ಷ ವಯಸ್ಸಿನ ಚೋಪ್ರಾ ಸ್ಪರ್ಧಿಸಲಿದ್ದಾರೆ. ನೀರಜ್ ಜೊತೆಗೆ ರೋಹಿತ್ ಯಾದವ್ ಕೂಡ […]
ಪ್ರತಿಷ್ಠಿತ ಡೈಮಂಡ್ ಲೀಗ್ ಕೂಟದಲ್ಲಿ ಬೆಳ್ಳಿ ಬಾಚಿದ ನೀರಜ್ ಚೋಪ್ರಾ: ಒಂದೇ ತಿಂಗಳಲ್ಲಿ ಎರಡು ಬಾರಿ ದಾಖಲೆ ಮುರಿದ ಚಿನ್ನದ ಛೋರ
ನವದೆಹಲಿ: ನಿನ್ನೆ ಸ್ಟಾಕ್‌ಹೋಮ್‌ನಲ್ಲಿ ನಡೆದ ಪ್ರತಿಷ್ಠಿತ ಡೈಮಂಡ್ ಲೀಗ್ ಕೂಟದಲ್ಲಿ ಒಲಿಂಪಿಕ್ ಚಾಂಪಿಯನ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ತಮ್ಮದೇ ರಾಷ್ಟ್ರೀಯ ದಾಖಲೆಯನ್ನು ಮುರಿದು ತಮ್ಮ ಮೊದಲ ಡೈಮಂಡ್ ಲೀಗ್ ಪದಕವನ್ನು ಪಡೆದರು. ಸ್ಟಾಕ್‌ಹೋಮ್ ಡೈಮಂಡ್ ಲೀಗ್‌ನಲ್ಲಿ ಚೋಪ್ರಾ 89.94 ಮೀಟರ್‌ಗಳ ಬೃಹತ್ ಎಸೆತದೊಂದಿಗೆ 2 ನೇ ಸ್ಥಾನ ಪಡೆದರು. ಹಾಲಿ ವಿಶ್ವ ಚಾಂಪಿಯನ್ ಆ್ಯಂಡರ್ಸನ್ ಪೀಟರ್ಸ್ 90.31 ಮೀಟರ್ ಎಸೆದು ಚಿನ್ನದ ಪದಕ ಗೆದ್ದರು. ಈ ತಿಂಗಳ ಆರಂಭದಲ್ಲಿ […]
ಪಾವೊ ನೂರ್ಮಿ ಗೇಮ್ಸ್: ತನ್ನದೇ ರಾಷ್ಟ್ರೀಯ ದಾಖಲೆಯನ್ನು ಮುರಿದ ಒಲಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ
ನವದೆಹಲಿ: ಟರ್ಕು (ಫಿನ್‌ಲ್ಯಾಂಡ್) ನಲ್ಲಿ ನಡೆದ 2022 ರ ಪಾವೊ ನೂರ್ಮಿ ಗೇಮ್ಸ್‌ನ ಪುರುಷರ ಜಾವೆಲಿನ್ ಥ್ರೋ ನಲ್ಲಿ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ, ತನ್ನದೇ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ. 24ರ ಹರೆಯದ ಚೋಪ್ರಾ ಮಂಗಳವಾರ (ಜೂನ್ 14) ದಂದು 89.30 ಮೀಟರ್ ದೂರ ಜಾವೆಲಿನ್ ಎಸೆದು ಹೊಸ ವೈಯಕ್ತಿಕ ಮತ್ತು ರಾಷ್ಟ್ರೀಯ ದಾಖಲೆಯನ್ನು ಮಾಡಿ ಬೆಳ್ಳಿ ಪದಕ ಗೆದ್ದಿದ್ದಾರೆ. ನೀರಜ್ ರ ಅತ್ಯುತ್ತಮ ಎಸೆತದ ರಾಷ್ಟ್ರೀಯ ದಾಖಲೆ 87.58 ಮೀಟರ್ ಆಗಿತ್ತು. […]
ಚಿನ್ನದ ಹುಡುಗ ನೀರಜ್ ಚೋಪ್ರಾ ಸ್ವಗ್ರಾಮದಲ್ಲಿ ಆತನ ಹೆಸರಿನ ಕ್ರೀಡಾಂಗಣ ನಿರ್ಮಾಣ
ಒಲಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಸ್ವಗ್ರಾಮದಲ್ಲಿ ಆತನದೇ ಹೆಸರಿನಲ್ಲಿ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು ಎಂದು ಹರಿಯಾಣದ ಮುಖ್ಯ ಮಂತ್ರಿ ಮನೋಹರ್ ಲಾಲ್ ಖಟ್ಟರ್ ಹೇಳಿದ್ದಾರೆ. ಭಾನುವಾರ (ಮೇ 1)ದಂದು ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರ ಸ್ವಗ್ರಾಮವಾದ ಪಾಣಿಪತ್‌ನಲ್ಲಿ ಕ್ರೀಡಾಂಗಣವನ್ನು ನಿರ್ಮಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಪಾಣಿಪತ್‌ನಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಉದ್ಘಾಟಿಸಿದ ನಂತರ ಮಾತನಾಡಿ, ಹರಿಯಾಣದ ನೀರಜ್ ಚೋಪ್ರಾ ಅವರು ಕಳೆದ ವರ್ಷ ಒಲಿಂಪಿಕ್ ಚಿನ್ನದ ಪದಕ ಗೆಲ್ಲುವ ಮೂಲಕ ದೇಶ […]