ಕೊಲ್ಲೂರು ದೇವಳಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ರಾಜು ಭೇಟಿ

ಕುಂದಾಪುರ: ರಾಜ್ಯದ ಪೊಲೀಸ್ ಮಹಾ ನಿರ್ದೇಶಕಿ ಮತ್ತು ಮಹಾ ನಿರೀಕ್ಷಕ (ಡಿಜಿ-ಐಜಿಪಿ)ರಾದ ನೀಲಮಣಿ ಎನ್ ರಾಜು ಅವರು ತಮ್ಮ ಪತಿಯ ಜೊತೆಗೆ ಮಂಗಳವಾರ ಕುಂದಾಪುರ ತಾಲೂಕಿನ ಕೊಲ್ಲೂರು ಶ್ರೀಮೂಕಾಂಬಿಕಾ ದೇವಳಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಸೋಮವಾರ ರಾತ್ರಿಯೇ ಕೊಲ್ಲೂರು ದೇವಳಕ್ಕೆ ತಮ್ಮ ಪತಿ ಡಿ ಎನ್ ನರಸಿಂಹ ರಾಜು ಅವರೊಂದಿಗೆ ಆಗಮಿಸಿದ್ದು ಮಂಗಳವಾರ ಬೆಳಿಗ್ಗೆ ಕುಟುಂಬ ಸಮೇತರಾಗಿ ಚಂಡಿಕಾಹೋಮದಲ್ಲಿ ಭಾಗವಹಿಸಿದರು ಬಳಿಕ ದೇವಳದ ವತಿಯಿಂದ ನೀಲಮಣಿ ರಾಜು ಅವರನ್ನು ಗೌರವಿಸಲಾಯಿತು ಈ ವೇಳೆ ದೇವಳದ […]