ಡ್ರಗ್ಸ್ ದಂಧೆ: ದೀಪಿಕಾ ಪಡುಕೋಣೆ ಸಹಿತ ಬಾಲಿವುಡ್ ನ ನಾಲ್ವರು ನಟಿಯರಿಗೆ ಎನ್ ಸಿಬಿಯಿಂದ ಸಮನ್ಸ್
ಮುಂಬೈ: ಡ್ರಗ್ಸ್ ದಂಧೆಯ ಆರೋಪದಡಿ ಬಾಲಿವುಡ್ ನಟಿಯರಾದ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್, ಸಾರಾ ಅಲಿಖಾನ್ ಹಾಗೂ ರಕುಲ್ ಪ್ರೀತ್ ಸಿಂಗ್ ಅವರಿಗೆ ಮಾದಕ ವಸ್ತುಗಳ ನಿಯಂತ್ರಣ ಸಂಸ್ಥೆ (ಎನ್‌ಸಿಬಿ) ಬುಧವಾರ ಸಮನ್ಸ್ ಜಾರಿ ಮಾಡಿದೆ. ಯಾವ ದಿನ ಇವರು ಎನ್‌ಸಿಬಿಯ ವಿಶೇಷ ತನಿಖಾ ತಂಡದ ಎದುರು ವಿಚಾರಣೆಗಾಗಿ ಹಾಜರಾಗಬೇಕೆಂದು ಇನ್ನೂ ನಿಖರವಾಗಿ ತಿಳಿಸಿಲ್ಲ ಎನ್ನಲಾಗಿದೆ. ಸುಶಾಂತ್ ಸಿಂಗ್ ಗೆಳತಿ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋವಿಕ್ ಚಕ್ರವರ್ತಿ, ಜಯಾ ಸಹಾ ಹಾಗೂ ಕೆಲವು ಡ್ರಗ್ಸ್ ಪೆಡ್ಲರ್‌ಗಳು […]