ನಟ ಸುಶಾಂತ್ ಸಿಂಗ್ ಸಂಶಯಾಸ್ಪದ ಸಾವು ಪ್ರಕರಣ: ನಟಿ ರಿಯಾ ಚಕ್ರವರ್ತಿ ಮನೆ ಮೇಲೆ ಎನ್ ಸಿಬಿ ಅಧಿಕಾರಿಗಳ ದಾಳಿ

ಮುಂಬೈ: ನಟ ಸುಶಾಂತ್ ಸಿಂಗ್ ಸಂಶಯಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಟಿ ರಿಯಾ ಚಕ್ರವರ್ತಿ ಮನೆ ಮೇಲೆ ಎನ್ ಸಿಬಿ ಅಧಿಕಾರಿಗಳು ದಾಳಿ ಪರಿಶೀಲನೆ ನಡೆಸಿದ್ದಾರೆ. ನಟ ಸುಶಾಂತ್ ಗೆ ನಟಿ ರಿಯಾ ಚಕ್ರವರ್ತಿ ಡ್ರಗ್ಸ್ ನೀಡುತ್ತಿದ್ದಳು, ಡ್ರಗ್ಸ್ ಸ್ಲೆಡ್ಲರ್ ನೊಂದಿಗೆ ನಂಟು ಹೊಂದಿದ್ದಳು ಎಂಬಂತಹ ಆರೋಪ ಕೇಳಿಬಂದಿತ್ತು. ಅಲ್ಲದೆ ರಿಯಾ ಹಾಗೂ ಡ್ರಗ್ಸ್ ಸ್ಲೆಡ್ಲರ್ ಅವರ ವಾಟ್ಸಾಪ್ ಸಂದೇಶ ಕೂಡ ಬಹಿರಂಗಗೊಂಡಿತ್ತು. ಈ ಹಿನ್ನೆಲೆಯಲ್ಲಿ ಎನ್ ಸಿಬಿ ಅಧಿಕಾರಿಗಳು ರಿಯಾ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದರು. […]