ಸಸ್ಯೋತ್ಸವವಾಯ್ತು ಮಗುವಿನ ನಾಮಕರಣೋತ್ಸವ: ಮಾದರಿಯಾಗಲಿ ಈ ದಂಪತಿಗಳ ಪರಿಸರ ಪ್ರೀತಿ

ಪ್ರಕೃತಿಯ ರಕ್ಷಣೆ ನಮ್ಮೆಲ್ಲರ ಸಂಕಲ್ಪವಾಗಬೇಕು ಎಂಬ ಉದ್ದೇಶದಿಂದ ಸಸಿ ವಿತರಣೆ ಮಾಡ್ತೇವೆ ಸಸಿ ನೆಟ್ಟು ಪೋಷಿಸೋಣ ಬನ್ನಿ, ಎಂದು ಕರೆದರೆ ನಮ್ಮಲ್ಲಿ ಮೂಗು ಮುರಿಯುವವರೇ ಹೆಚ್ಚು , ಆದರೆ ನಮ್ಮೂರಲ್ಲಿ ಮನೆಗಳಲ್ಲಿ ನಡೆಯುವ ಸಂಭ್ರಮಗಳ‌ ನಡುವೆಯೇ ಇಂಥಹ ಸಂಕಲ್ಪಗಳಿಗೂ ಅವಕಾಶ ನೀಡಿದರೆ ಅದು ಹೆಚ್ಚು ಪರಿಣಾಮಕಾರಿಯೂ ಆಗುತ್ತದೆ. ಸಂಭ್ರಮದ ನಡುವೆಯೇ ಸಂಕಲ್ಪವನ್ನು ತೊಡುವ ಒಂದು ವಿಶಿಷ್ಟ ಕಾರ್ಯಕ್ರಮ ಬುಧವಾರ ಮಟ್ಟು ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಿತು. ಪ್ರಸಿದ್ಧ ಆಗಮ ವಿದ್ವಾಂಸ ಜ್ಯೋತಿಷಿ ಮಟ್ಟು ಪ್ರವೀಣ ಹಾಗೂ ಹರಿಣಿ ತಂತ್ರಿಗಳು […]