ಪ್ರಥಮ್ ಕಾಮತ್ ರಾಷ್ಟ್ರಮಟ್ಟಕ್ಕೆ ಆಯ್ಕೆ

ಉಡುಪಿ: ಪೆಟ್ರೊಲಿಯಂ ಸಂರಕ್ಷಣಾ ಸಂಸ್ಥೆ, ‘ಸಕ್ಷಮ್’ ರಾಷ್ಟ್ರಿಯಮಟ್ಟದ  ಡ್ರಾಯಿಂಗ್ ಸ್ಪರ್ಧೆಯಲ್ಲಿ ಕಟಪಾಡಿಯ ಎಸ್.ವಿ.ಕೆ. ಆಂಗ್ಲ ಮಾಧ್ಯಮ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿ ಕೆ.ಪ್ರಥಮ್ ಕಾಮತ್ ಅವರು ರಾಜ್ಯಮಟ್ಟದಲ್ಲಿ ಆಯ್ಕೆಯಾಗಿ ಡಿ.೨೬ ರಂದು ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರು ಸುಜಾತ ನಾಗೇಶ್ ಕಾಮತ್ ಇವರ ಪುತ್ರ. ಉಡುಪಿಯ ದೃಶ್ಯ ಸ್ಕೂಲ್ ಆಫ್  ಆರ್ಟ್ಸ್ ನ ವಿದ್ಯಾರ್ಥಿ.ರಮೇಶ್ ರಾವ್ ಹಾಗೂ ಪ್ರಸಾದ್ ರಾವ್ ಇವರಲ್ಲಿ ತರಬೇತಿ ಪಡೆಯುತ್ತಿದ್ದಾರೆ.