ಜಿಲ್ಲೆಯಲ್ಲಿ ಶಾಲಾ ಮಕ್ಕಳ ದೌರ್ಜನ್ಯ ಪ್ರಕರಣ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿ: ವೀಣಾ ಬಿ.ಎನ್.
ಉಡುಪಿ: ಇತ್ತೀಚೆಗೆ ರಾಜ್ಯದ ಕೆಲವು ಜಿಲ್ಲೆಗಳ ಶಾಲೆಯಲ್ಲಿ ಶಿಕ್ಷಕರು ಮಕ್ಕಳ ಮೇಲೆ ದೌರ್ಜನ್ಯ ನಡೆಸುತ್ತಿರುವ ಕುರಿತಂತೆ ವರದಿಯಾಗುತ್ತಿದ್ದು, ಮಕ್ಕಳು ಅತ್ಯಂತ ಮೃದು ಮತ್ತು ಸೂಕ್ಷ್ಮ ಮನಸ್ಸಿನವರಾಗಿದ್ದು, ಶಿಕ್ಷಕರು ಮಕ್ಕಳ ಸ್ವಭಾವವನ್ನು ಅರಿತು, ಸ್ಥಿತಪ್ರಜ್ಞರಾಗಿ ಮಕ್ಕಳೊಂದಿಗೆ ವರ್ತಿಸಬೇಕಾಗಿರುತ್ತದೆ. ಈ ಬಗ್ಗೆ ಶಿಕ್ಷಕ ತರಬೇತಿ ಅವಧಿಯಲ್ಲಿ ತರಬೇತಿ ನೀಡಿದ್ದರೂ ಸಹ ಇಂತಹ ಘಟನೆಗಳು ನಡೆಯುತ್ತಿರುವುದಕ್ಕೆ ಅತ್ಯಂತ ಬೇಸರ ವ್ಯಕ್ತಪಡಿಸಿದ ಅಪರ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಇಂತಹ ಯಾವುದೇ ಪ್ರಕರಣಗಳು ನಡೆಯದಂತೆ ಮುನ್ನೆಚ್ಚರಿಕೆಯಾಗಿ, ಶಿಕ್ಷಕರು ಮಕ್ಕಳೊಂದಿಗೆ ಸೂಕ್ಷ್ಮವಾಗಿ ಮತ್ತು ಸಂಯಮದಿಂದ ವರ್ತಿಸುವ ಕುರಿತಂತೆ […]