ಮುನಿಯಾಲ್ ಆಯುರ್ವೇದ ಸಂಸ್ಥೆಯಲ್ಲಿ ರಾಷ್ಟೀಯ ಆಯುರ್ವೇದ ದಿನಾಚರಣೆ; ಧನ್ವಂತರಿ ಜಯಂತಿ ಕಾರ್ಯಕ್ರಮ

ಉಡುಪಿ: ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಧನ್ವಂತರಿ ಜಯಂತಿಯ ಅಂಗವಾಗಿ “ಪೋಷಣಕ್ಕಾಗಿ ಆಯುರ್ವೇದ” ಎನ್ನುವ ಶೀರ್ಷಿಕೆಯಡಿಯಲ್ಲಿ ಮಣಿಪಾಲದ ಮುನಿಯಾಲ್ ಆಯುರ್ವೇದ ಸಂಸ್ಥೆಯು ನ.2ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ಆಯುರ್ವೇದದಲ್ಲಿ ಹೇಳಿದ ವಿವಿಧಪಥ್ಯಾಹಾರಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯನ್ನು ಸಂಸ್ಥೆಯ ಏರ್ಪಡಿಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಬಿ ಕಾರ್ಯಕ್ರಮ ಉದ್ಘಾಟಿಸಿ, ಆಹಾರ ಮತ್ತು ಪಥ್ಯಾಹಾರ ಮತ್ತು ಸಮಕಾಲೀನಕ್ಕೆ ಅದರ ಅಗತ್ಯತೆಯ ಬಗ್ಗೆ ತಿಳಿಸಿದರು. ಗೋಸ್ವಾಲ್ ಆಯುರ್ವೇದ ಕೇಂದ್ರದ ಮುಖ್ಯಸ್ಥರಾದ ಡಾ.ತನ್ಮಯ ಗೋಸ್ವಾಮಿ ಆಯುರ್ವೇದ ಮತ್ತು ಧನ್ವಂತರಿ ದಿನದ ಮಹತ್ವದ […]