ಸೆ. 28 ರಂದು ನಟನಂ ಇನ್ಸ್ಟಿಟ್ಯೂಟ್ ಆಫ್ ಡಾನ್ಸ್ ವತಿಯಿಂದ ಪುರಂದರದಾಸರ ಜೀವನಾಧಾರಿತ ನೃತ್ಯರೂಪಕ ಪ್ರದರ್ಶನ
ಉಡುಪಿ: ದಾಸ ಶ್ರೇಷ್ಠ ಪುರಂದರದಾಸರು ನಾರದಂಶ ಸಂಭೂತರು. ಇವರು ಕರ್ನಾಟಕ ಶಾಸ್ತ್ರೀಯ ಸಂಗೀತ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅನೇಕ ದೇವರ ನಾಮಗಳು, ಉಗಾಭೋಗಗಳು, ಸುಳಾದಿಗಳನ್ನು ಬರೆದಿದ್ದಾರೆ. ಇವರನ್ನು “ಕರ್ನಾಟಕ ಸಂಗೀತದ ಪಿತಾಮಹ” ಎಂದು ಕರೆಯುತ್ತಾರೆ. ಸಣ್ಣ ಮಕ್ಕಳಿಗೆ ಸುಲಭವಾಗಿ ಸಂಗೀತವನ್ನು ಕಲಿಯಲು ಸರಳೆ ವರಸೆ, ಜಂಟಿವರಸೆ, ಅಲಂಕಾರಗಳು, ಪಿಳ್ಳಾರಿ ಗೀತೆಗಳನ್ನು ರಚಿಸಿದ್ದಾರೆ. ಸಮಾಜದಲ್ಲಿ ಇರುವ ಡಾಂಭಿಕತನ, ಮೂಢನಂಬಿಕೆಯಿಂದ ಹಿಡಿದು ಆಧ್ಯಾತ್ಮದವರೆಗೆ ದೇವರ ನಾಮಗಳನ್ನು ಬರೆದಿದ್ದಾರೆ. ಇಂತಹ ದಾಸ ಶ್ರೇಷ್ಠರ ಅನೇಕ ಕೃತಿಗಳಲ್ಲಿ ಅವರ ಜೀವನ ಚರಿತ್ರೆಗೆ […]