50,000 ವರ್ಷಗಳ ನಂತರ ಭೂಮಿಗೆ ಭೇಟಿ ನೀಡಿದ ಹಸಿರು ಬಣ್ಣದ ಧೂಮಕೇತು

ಕಾಮೆಟ್ C/2022 E3 (ZTF) ಅಥವಾ ಹಸಿರು ಬಣ್ಣದ ಧೂಮಕೇತುವು ರಾತ್ರಿ ಆಗಸದಲ್ಲಿ ಬುಧವಾರದಂದು ಕಂಡುಬಂದಿದೆ. ಅಮೇರಿಕಾದ ಬಾಹ್ಯಕಾಶ ಸಂಸ್ಥೆ ನಾಸಾ ಪ್ರಕಾರ, ಧೂಮಕೇತು ಸುಮಾರು 50,000 ವರ್ಷಗಳ ನಂತರ ನಮ್ಮ ಗ್ರಹಕ್ಕೆ ಭೇಟಿ ನೀಡಿದೆ. ಪ್ರಪಂಚದಾದ್ಯಂತದ ನಕ್ಷತ್ರ ವೀಕ್ಷಕರು ಮತ್ತು ಖಗೋಳಶಾಸ್ತ್ರಜ್ಞರು ಧೂಮಕೇತುವನ್ನು ವೀಕ್ಷಿಸಿ ಸಂತಸ ಪಟ್ಟಿದ್ದಾರೆ. ಧೂಮಕೇತುವು ಭೂಮಿಯಿಂದ ಕೇವಲ 26 ಮಿಲಿಯನ್ ಮೈಲುಗಳಷ್ಟು (ಅಥವಾ 42 ಮಿಲಿಯನ್ ಕಿಲೋಮೀಟರ್) ದೂರದಿಂದ ಹಾದುಹೋಗಿದೆ. ಕಳೆದ ಕೆಲವು ತಿಂಗಳಿನಿಂದ ಈ ಹಸಿರು ಧೂಮಕೇತು ಆಕಾಶದಲ್ಲಿದ್ದರೂ ಬುಧವಾರದಂದು […]

ಮುದ್ದಾಗಿ ನಗುತಿಹನಮ್ಮ ನಮ್ಮ ಸೂರ್ಯ! ನಗುತ್ತಿರುವ ಸೂರ್ಯನ ಚಿತ್ರವನ್ನು ಹಂಚಿಕೊಂಡ ನಾಸಾ

ನ್ಯೂಯಾರ್ಕ್: ಈ ವಾರ ಸೂರ್ಯನ ಹೊಸ ಉಪಗ್ರಹ ಚಿತ್ರವನ್ನು ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಬಿಡುಗಡೆ ಮಾಡಿದೆ. ಈ ಚಿತ್ರದಲ್ಲಿ ನಮ್ಮ ಸೂರ್ಯನು ನಗುತ್ತಿರುವಂತೆ ಭಾಸವಾಗುತ್ತಿದೆ! ನಾಸಾದ ಸೋಲಾರ್ ಡೈನಾಮಿಕ್ಸ್ ಅಬ್ಸರ್ವೇಟರಿಯಿಂದ ಫೋಟೋವನ್ನು ಸೆರೆಹಿಡಿಯಲಾಗಿದೆ. ಅಬ್ಸರ್ವೇಟರಿಯು ಸೂರ್ಯನ ವಿಕಿರಣದ ಉತ್ಪಾದನೆಯಲ್ಲಿನ ಬದಲಾವಣೆಗಳನ್ನು ಅರ್ಥಮಾಡಿಕೊಳ್ಳಲು ಕೆಲಸ ಮಾಡುತ್ತದೆ. “ನೇರಳಾತೀತ ಬೆಳಕಿನಲ್ಲಿ ನೋಡಿದರೆ, ಸೂರ್ಯನ ಮೇಲಿನ ಕಾಣುವ ಈ ಕಪ್ಪು ಪ್ರದೇಶಗಳನ್ನು ಕರೋನಲ್ ರಂಧ್ರಗಳು ಎಂದು ಕರೆಯಲಾಗುತ್ತದೆ ಮತ್ತು ಅವು ವೇಗದ ಸೌರ ಮಾರುತವು ಬಾಹ್ಯಾಕಾಶಕ್ಕೆ ಚಿಮ್ಮುವ ಪ್ರದೇಶಗಳಾಗಿವೆ” ಎಂದು […]

ಕ್ಷುದ್ರಗ್ರಹಕ್ಕೆ ಬಾಹ್ಯಾಕಾಶ ನೌಕೆಯನ್ನು ಅಪ್ಪಳಿಸಿದ ನಾಸಾ: ವಿಚಲನ ತಂತ್ರಜ್ಞಾನದ ಯಶಸ್ವಿ ಪರೀಕ್ಷೆ

ವಿಚಲನ ತಂತ್ರಜ್ಞಾನವನ್ನು ಪರೀಕ್ಷಿಸಲು ನಾಸಾ ತನ್ನ ಬಾಹ್ಯಾಕಾಶ ನೌಕೆಯನ್ನು ಕ್ಷುದ್ರಗ್ರಹಕ್ಕೆ ಅಪ್ಪಳಿಸಿದೆ. ಕಳೆದ ವರ್ಷದ ನವೆಂಬರ್‌ ನಲ್ಲಿ ಉಡಾವಣೆಯಾದ ವೆಂಡಿಂಗ್ ಮೆಷಿನ್-ಗಾತ್ರದ ಬಾಹ್ಯಾಕಾಶ ನೌಕೆ ಡಾರ್ಟ್ (DART) ಫುಟ್‌ಬಾಲ್ ಮೈದಾನದ ಗಾತ್ರದ ಕ್ಷುದ್ರಗ್ರಹ ಡೈಮಾರ್ಫಾಸ್‌ ನತ್ತ ಪ್ರಯಾಣಿಸಿದೆ ಮತ್ತು ಅದಕ್ಕೆ ಡಿಕ್ಕಿ ಹೊಡೆದಿದೆ ಮತ್ತು ಅದನ್ನು ಪಥದಿಂದ ಹೊರಕ್ಕೆ ತಳ್ಳಿದೆ. ಬಾಹ್ಯಾಕಾಶದಲ್ಲಿ 10 ತಿಂಗಳ ಹಾರಾಟದ ನಂತರ, ನಾಸಾ ದ ಡಬಲ್ ಆಸ್ಟ್ರಾಯಿಡ್ ರಿ-ಡೈರೆಕ್ಷನ್ ಟೆಸ್ಟ್ (ಡಾರ್ಟ್), ವಿಶ್ವದ ಮೊದಲ ಗ್ರಹಗಳ ರಕ್ಷಣಾ ತಂತ್ರಜ್ಞಾನ ಪ್ರದರ್ಶನವು ಸೋಮವಾರ […]

ಮಂಗಳನ ಅಂಗಳದಿಂದ ನಕ್ಷತ್ರದಂತೆ ಹೊಳೆಯುವ ಭೂಮಿಯ ಕಂಡಿರಾ….

ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾದ ಕ್ಯೂರಿಯಾಸಿಟಿ ನೌಕೆಯು ಮಂಗಳನ ಅಂಗಳದಲ್ಲಿದ್ದು, ಅಲ್ಲಿಂದ ರಾತ್ರಿ ಕಾಲದಲ್ಲಿ ಗಗನದಲ್ಲಿ ಮಿನುಗುವ ನಮ್ಮ ಭೂಮಿಯ ಚಿತ್ರವನ್ನು ಸೆರೆಹಿಡಿದಿದೆ. “ಮನೆಯಿಂದ 225 ಮಿಲಿಯನ್ ಕಿಮೀ ದೂರ, ಮಂಗಳದ ಮೇಲ್ಮೈಯಿಂದ ಭೂಮಿಯನ್ನು ನೋಡಿದಾಗ, ಮಂಗಳದ ರಾತ್ರಿ ಆಕಾಶದಲ್ಲಿ ಯಾವುದೇ ನಕ್ಷತ್ರಕ್ಕಿಂತ ಪ್ರಕಾಶಮಾನವಾಗಿ ಭೂಮಿ ಹೊಳೆಯುತ್ತದೆ” ಎಂದು ಕ್ಯೂರಿಯಾಸಿಟಿಯು ಟ್ವಿಟರ್ ನಲ್ಲಿ ಈ ಚಿತ್ರವನ್ನು ಹಂಚಿಕೊಂಡಿದೆ.

ಮೇ 16 ರಂದು ಸಂಪೂರ್ಣ ಚಂದ್ರಗ್ರಹಣ: ಪ್ರಪಂಚದ ಹಲವೆಡೆ ರಕ್ತ ಚಂದಿರನ ನೋಡುವ ಭಾಗ್ಯ

ದೆಹಲಿ: ಮೇ 15-16ರ ಮಧ್ಯರಾತ್ರಿಯಲ್ಲಿ ಈ ವರ್ಷದ ಮೊದಲ ಸಂಪೂರ್ಣ ಚಂದ್ರಗ್ರಹಣಕ್ಕೆ ಜಗತ್ತು ಸಾಕ್ಷಿಯಾಗಲಿದೆ. timeanddate.com ಪ್ರಕಾರ, ಈ ರಕ್ತ ಚಂದಿರ ಚಂದ್ರಗ್ರಹಣದ ಒಟ್ಟು ಹಂತವು ಉತ್ತರ ಮತ್ತು ದಕ್ಷಿಣ ಅಮೆರಿಕಾದಾದ್ಯಂತ ಮತ್ತು ಯುರೋಪ್ ಮತ್ತು ಆಫ್ರಿಕಾದ ಭಾಗಗಳಿಂದ ಗೋಚರಿಸುತ್ತದೆ. ದಕ್ಷಿಣ/ಪಶ್ಚಿಮ ಯುರೋಪ್, ದಕ್ಷಿಣ/ಪಶ್ಚಿಮ ಏಷ್ಯಾ, ಆಫ್ರಿಕಾ, ಉತ್ತರ ಅಮೆರಿಕದ ಬಹುಭಾಗ, ದಕ್ಷಿಣ ಅಮೆರಿಕ, ಪೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ ಮತ್ತು ಅಂಟಾರ್ಟಿಕಾ ಖಂಡಗಳು ಗ್ರಹಣದ ಕೆಲವು ಭಾಗಗಳನ್ನು ನೋಡುವ ಅವಕಾಶವನ್ನು ಪಡೆಯಲಿದೆ. ಸಂಪೂರ್ಣ ಗ್ರಹಣದ ಅವಧಿಯು […]