ಕಾಡಬೆಟ್ಟುವಿನಲ್ಲಿ ನರ್ತಕಿ ಭರತ ನಾಟ್ಯ ತರಬೇತಿ ಶಾಲೆ ಉದ್ಘಾಟನೆ

ಉಡುಪಿ: ನಮ್ಮ ದೇಶದ ಭವ್ಯ ಪ್ರಾಚೀನ ಸಾಂಸ್ಕೃತಿಕ ಪರಂಪರೆಗಳಲ್ಲಿ ಒಂದಾಗಿರುವ ಸಂಗೀತ, ನೃತ್ಯ ಕಲೆಯನ್ನು ಇಂದಿನ ಯುವ ಪೀಳಿಗೆಗೆ ದಾಟಿಸುವ ಅಗತ್ಯವಿದೆ ಎಂದು ತಲ್ಲೂರು ಫ್ಯಾಮಿಲಿ ಟ್ರಸ್ಟ್ನ ಪ್ರವರ್ತಕ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಹೇಳಿದರು. ಅವರು ಗುರುವಾರ ಉಡುಪಿ ಬ್ರಹ್ಮಗಿರಿಯ ಕಾಡಬೆಟ್ಟುವಿನಲ್ಲಿ ನೃತ್ಯಗುರು ವಿದುಷಿ ಶಾಂಭವಿ ಆಚಾರ್ಯ ಅವರ ಭರತನಾಟ್ಯ ತರಬೇತಿ ಶಾಲೆ ‘ನರ್ತಕಿ’ಯ ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರಾಚೀನ ಭಾರತದಲ್ಲಿ ರಾಜಾಶ್ರಯ ಪಡೆದಿದ್ದ, ಭರತಮುನಿಗಳಿಂದ ಲೋಕಾರ್ಪಣೆಗೊಂಡ ಈ ಶ್ರೀಮಂತ […]