ಡಿ.17 ರಂದು ತುಳು ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅಭಿನಂದನಾ ಸಮಾರಂಭ

ಉಡುಪಿ: ತುಳುನಾಡಿನ ಸಾಹಿತ್ಯಿಕ-ಸಾಂಸ್ಕೃತಿಕ-ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಇವರ 80 ನೇ ಸಂವತ್ಸರದ ಪ್ರಯುಕ್ತ ಸಿರಿತುಪ್ಪೆ ಕಾರ್ಯಕ್ರಮವನ್ನು ಡಿ.17 ರಂದು ಬೆಳಿಗ್ಗೆ 8.45 ರಿಂದ ಬನ್ನಂಜೆ ನಾರಾಯಣಗುರು ಆಡಿಟೋರಿಯಂ ನಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ನಿಮಿತ್ತ ವಿಚಾರಗೋಷ್ಠಿ, ಆರಾಧನಾ ಗೋಷ್ಠಿ, ಪುಸ್ತಕ ಬಿಡುಗಡೆ, ಪುಸ್ತಕ ಪ್ರದರ್ಶನ, ಪಾಡ್ದನ, ಜಾನಪದ ನೃತ್ಯ, ಯಕ್ಷಗಾನ, ತುಳುನಾಡ ಪರಿಕರಿಗಳ ಪ್ರದರ್ಶನ ನಡೆಯಲಿದೆ.