ಮಣಿಪಾಲ ಶ್ರೀ ನರಸಿಂಹ ದೇವಸ್ಥಾನ: ಪ್ರತಿಷ್ಠಾ ವರ್ಧಂತಿ ಆಚರಣೆ

ಮಣಿಪಾಲ: ಶ್ರೀ ನರಸಿಂಹ ದೇವಸ್ಥಾನ ನರಸಿಂಗೆ ಮಣಿಪಾಲ ಇದರ ಪ್ರತಿಷ್ಠೆ ವರ್ಧಂತಿ ಮತ್ತು ನರಸಿಂಹ ಜಯಂತಿ ಯನ್ನು ದಿನಾಂಕ 24 ಮತ್ತು 25 ರಂದು ಕೋವಿಡ್ ನಿರ್ಬಂಧದಿಂದ ಕೇವಲ ಧಾರ್ಮಿಕ ವಿಧಿಗಳಿಗೆ ಸೀಮಿತವಾಗಿ ಅರ್ಚಕರು‌ ಹಾಗೂ ಆಡಳಿತ ಮಂಡಳಿಯವರು ಸೇರಿ ಸರಳವಾಗಿ ಆಚರಿಸಲಾಯಿತು. ದೇವಳದ ಅನೇಕ ಭಜಕರು ಹೂವಿನ ಅಲಂಕಾರಕ್ಕೆ ದೇವಳಕ್ಕೆ ಹೂವನ್ನು ಕಳುಹಿಸಿ ಅಲಂಕಾರ ಮಾಡಿಸಿ, ಅವರವರ ಮನೆಯಿಂದ ಪ್ರತಿಸಿದರು. ಎಲ್ಲರಿಗೂ ಅಲಂಕಾರದ ದೇವರ ಚಿತ್ರ ಕಳುಹಿಸಗಿದ್ದು ಹಾಗೂ ಲೋಕಕ್ಕೆ ತಗಲಿದ ಕಂಟಕ ದೂರವಾಗಲು ಪ್ರಾರ್ಥಿಸಲಾಯಿತು. […]