ನಂದಿನಿ ಪಾರ್ಲರ್ ಘಟಕ ಸ್ಥಾಪನೆ: ಅರ್ಜಿ ಆಹ್ವಾನ

ಉಡುಪಿ, ಫೆ.20: ಡಾ.ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಗಳ ಸಹಯೋಗದೊಂದಿಗೆ ನಿರುದ್ಯೋಗಿ ಪ.ಜಾತಿ/ ಪ.ಪಂಗಡದ ಯುವಕ/ ಯುವತಿಯರಿಗೆ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಅಭಿವೃದ್ಧಿ ಪಡಿಸಲು ಗ್ರಾಮೀಣ ಭಾಗದಲ್ಲಿ ಗ್ರಾಮ ಪಂಚಾಯತ್ ಅಂಗಡಿ ಕೋಣೆಗಳಲ್ಲಿ/ ಖಾಲಿ ಸ್ಥಳಗಳಲ್ಲಿ ಲೀಸ್/ ಬಾಡಿಗೆ ಆಧಾರದಲ್ಲಿ ನಂದಿನಿ ಪಾರ್ಲರ್‍ಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿರುತ್ತದೆ. ಆಸಕ್ತಿಯಿರುವ ಅಭ್ಯರ್ಥಿಗಳು ಮಾರ್ಚ್ 5 ರ ಒಳಗೆ ಅರ್ಜಿಯನ್ನು ಡಾ: ಬಿ. ಆರ್. ಅಂಬೇಡ್ಕರ್ ಅಭಿವೃದ್ದಿ ನಿಗಮ, ಜಿಲ್ಲಾ […]