ಕುಂದಾಪುರ: ಪ್ರಾಗೈತಿಹಾಸಿಕ ನಂದಿಗೋಣ ನೃತ್ಯದ ಬಂಡೆ ಕಲೆ ಪತ್ತೆ ಹಚ್ಚಿದ ಪುರಾತತ್ವ ಶಾಸ್ತ್ರಜ್ಞರು
ಕುಂದಾಪುರ: ಇಲ್ಲಿನ ಬುದ್ದನಜೆಡ್ಡು ಮತ್ತು ಅವಲಕ್ಕಿ ಪಾರೆ ಎಂಬಲ್ಲಿ ಪ್ರಾಗೈತಿಹಾಸಿಕ ಮಹತ್ವವುಳ್ಳ ನಂದಿಗೋಣ ನೃತ್ಯದ ಬಂಡೆಕಲೆಯನ್ನು ಎಂ.ಆರ್.ಎಸ್ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಇಲಾಖೆಯು ಕಂಡುಹಿಡಿದಿದೆ ಎಂದು ಪುರಾತತ್ವ ಶಾಸ್ತ್ರಜ್ಞ ಪ್ರೊ.ಟಿಮುರುಗೇಶಿ ತಿಳಿಸಿದ್ದಾರೆ. ಕಲ್ಲಿನ ಮೇಲೆ ಕೆತ್ತಲಾಗಿರುವ ಈ ಚಿತ್ರದಲ್ಲಿ ನಂದಿಯೊಂದನ್ನು ಹಲಗೆ ಮೇಲೆ ಹೊತ್ತುಕೊಂಡು ಹೋಗುತ್ತಿರುವಂತೆ ಕೆತ್ತಲಾಗಿದ್ದು, ಬಹುಶಃ ಇದು ನೃತ್ಯಕಲೆಯನ್ನು ಪ್ರತಿನಿಧಿಸುತ್ತಿರಬಹುದು ಎಂದು ಅಂದಾಜಿಸಲಾಗಿದೆ. ಜನಪದ ಸಂಸ್ಕೃತಿಯು ಧಾರ್ಮಿಕ ಹಾಗೆಯೇ ನಾಟಕೀಯ ಪ್ರದರ್ಶನಗಳೆರಡನ್ನೂ ಸಂಯೋಜಿಸುತ್ತದೆ. ಇದು ಕರಾವಳಿಯ ಭೂತ ಕೋಲದಲ್ಲಿ ವಿಸ್ತೃತವಾದ ನೃತ್ಯ […]