ಲಕೋಟೆಯಲ್ಲಿದೆ ‘ಪ್ರಾಜೆಕ್ಟ್ ಕೆ’ ಹೆಸರು: ಶೀರ್ಷಿಕೆ ಊಹಿಸಿದ ಸಿನಿಪ್ರೇಮಿಗಳು
ಪ್ರಭಾಸ್ ನಟನೆಯ ಅನೇಕ ಸಿನಿಮಾಗಳು ಬಿಗ್ ಬಜೆಟ್ನಲ್ಲೇ ತಯಾರಾದವುಗಳಾಗಿವೆ. ಆದರೆ ‘ಆದಿಪುರುಷ್’ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಹಿಟ್ ಆಗಲಿಲ್ಲ. ಇದೀಗ ಅವರ ಮುಂಬರುವ ‘ಪ್ರಾಜೆಕ್ಟ್ ಕೆ’ ಸಿನಿಮಾದ ಮೇಲೆ ಸಿನಿಪ್ರೇಮಿಗಳ ದೃಷ್ಟಿ ಕೇಂದ್ರಿಕೃತವಾಗಿದೆ. ಟಾಲಿವುಡ್ ಸ್ಟಾರ್ ನಿರ್ದೇಶಕ ನಾಗ್ ಅಶ್ವಿನ್ ಅವರು ಈ ಚಿತ್ರಕ್ಕೆ ಆಯಕ್ಷನ್ ಕಟ್ ಹೇಳುತ್ತಿದ್ದಾರೆ. ಬಿಗ್ ಬಜೆಟ್ನಲ್ಲಿ ನಿರ್ಮಾಣವಾದ ‘ಆದಿಪುರುಷ್’ ಸಿನಿಮಾದ ನಂತರ ಅಭಿಮಾನಿಗಳ ಗಮನ ಪ್ರಭಾಸ್ ಅವರ ಮುಂಬರುವ ಪ್ರಾಜೆಕ್ಟ್ಗಳತ್ತ ನೆಟ್ಟಿದೆ’ಪ್ರಾಜೆಕ್ಟ್ ಕೆ’ ಹೆಸರಿನ ಪೂರ್ಣ ಅರ್ಥ ತಿಳಿದುಕೊಳ್ಳಲು ಸಿನಿಪ್ರೇಮಿಗಳು ಉತ್ಸುಕರಾಗಿದ್ದಾರೆ. […]