ನಮಾಮಿ ಗಂಗಾ ಯೋಜನೆ ಜಾಗತಿಕ ಪರಿಸರ ಸಂರಕ್ಷಣೆಯಲ್ಲಿ ಒಂದು ಮೈಲಿಗಲ್ಲು: ಜಿ. ಅಶೋಕ್ ಕುಮಾರ್

ಮಣಿಪಾಲ: ಕೇಂದ್ರ ಸರಕಾರದ ಗಂಗಾ ನದಿಯನ್ನು ಸ್ವಚ್ಛ ಮತ್ತು ಪುನರ್ಜೀವನಗೊಳಿಸುವ ‘ನಮಾಮಿ ಗಂಗಾ’ ಯೋಜನೆಯು ಜಗತ್ತಿನ ಅತ್ಯಂತ ಪ್ರಮುಖ ಯೋಜನೆಗಳಲ್ಲಿ ಒಂದಾಗಿದ್ದು ಇದಕ್ಕೆ ಕೇಂದ್ರ ಸರಕಾರವು 20 ಸಾವಿರಕ್ಕೂ ಮಿಕ್ಕಿ ಕೋಟಿ ರೂಪಾಯಿಯನ್ನು ತೆಗೆದಿರಿಸಿದೆ. ಕಳೆದ 9 ವರ್ಷಗಳಲ್ಲಿ 450ಕ್ಕೂ ಮಿಕ್ಕಿ ವಿವಿಧ ಕಾಮಗಾರಿಗಳನ್ನು ಕಾರ್ಯರೂಪಗೊಳಿಸಿ ಗಂಗಾ ನದಿಯನ್ನು ಪುನರ್ಜೀವನಗೊಳಿಸುವ ಕಾರ್ಯ ನಡೆದಿದೆ. ಇದಕ್ಕೆ ಸಾಕಷ್ಟು ಪ್ರತಿಫಲವು ದೊರಕಿದ್ದು ಈ ನಿಟ್ಟಿನಲ್ಲಿ ಹತ್ತು ಹಲವು ಕಾರ್ಯ ಯೋಜನೆಗಳು ಕಾರ್ಯಗತಗೊಳ್ಳುತ್ತಿದೆ. ಅವಿರಲಧಾರ ಗಂಗಾ , ನಿರ್ಮಲಧಾರ ಗಂಗಾ, ಜ್ಞಾನ […]

ಮಣಿಪಾಲ: ಮಾಹೆ ವತಿಯಿಂದ ನಮಾಮಿ ಗಂಗೆ ಅರಿವು ಕಾರ್ಯಾಗಾರ

ಮಣಿಪಾಲ: ಮಾಹೆ ವತಿಯಿಂದ ಎಂ.ಸಿ.ಎನ್.ಎಸ್ ನ ಪ್ಲಾಟಿನಂ ಹಾಲ್ ನಲ್ಲಿ ಶನಿವಾರದಂದು ನಡೆದ ನಮಾಮಿ ಗಂಗೆ ಅರಿವು ಕಾರ್ಯಾಗಾರದಲ್ಲಿ ನದಿಯ ಪಾವಿತ್ರ್ಯತೆ, ಅವುಗಳ ಪ್ರಾಮುಖ್ಯತೆ, ಮನುಷ್ಯನ ಜೀವನದಲ್ಲಿ ನೀರಿನ ಪಾತ್ರ, ಹಿಂದಿನ ಕಾಲದಿಂದಲೂ ರಾಜ ಮಹಾರಾಜರುಗಳಿಂದ ಕೆರೆಗಳನ್ನು ಕಟ್ಟಿಸಿದ ಉದ್ದೇಶ ಇವೆಲ್ಲದರ ಬಗ್ಗೆ ಶಾಲಾ-ಕಾಲೇಜುಗಳ ಮಕ್ಕಳಿಗೆ ಅರಿವು ಮೂಡಿಸಲಾಯಿತು. ಗಣ್ಯರು ಹಾಗೂ ಪ್ರಾಧ್ಯಾಪಕರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಗಂಗಾನದಿಯ ಹುಟ್ಟು ಹಾಗೂ ಭಾರತದಲ್ಲಿ ಅದಕ್ಕೆ ಇರುವ ಮಹತ್ವದ ಬಗ್ಗೆ ತಿಳಿಸಲಾಯಿತು.