ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಗೆ ಭಾಜನವಾಯ್ತು ನಾಗೇಶ್ ಆಚಾರ್ಯ ಕೋಟ ನಿರ್ಮಿಸಿದ ವಿರಾಟ್ ಕೊಹ್ಲಿಯ ವಿಶಿಷ್ಟ ಕಲಾಕೃತಿ
ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಚಿತ್ರಪಾಡಿ ಗ್ರಾಮದ ಕಾರ್ತಟ್ಟು ಸುಬ್ರಾಯ ಆಚಾರ್ ಹಾಗೂ ಸುಶೀಲ ದಂಪತಿಯ ಹಿರಿಯ ಪುತ್ರ ನಾಗೇಶ್ ಆಚಾರ್ಯ ಕೋಟ ಇತ್ತೀಚೆಗೆ ತೆಂಗಿನ ಗರಿಯಲ್ಲಿ ರಚಿಸಿದ ಭಾರತೀಯ ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿಯ ಕಲಾಕೃತಿಯು ಎಕ್ಸ್ ಕ್ಲೂಸಿವ್ ವರ್ಲ್ಡ್ ರೆಕಾರ್ಡ್ ಹಿರಿಮೆಗೆ ಪಾತ್ರವಾಗಿದೆ. ನಾಗೇಶ್ ಆಚಾರ್ಯ ಸ್ವಂತ ಮರದ ಕೆತ್ತನೆಯ ಶಿಲ್ಪಕಲಾ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ತನ್ನ ವೃತ್ತಿ ಬದುಕಿನ ಬಿಡುವಿನ ವೇಳೆಯಲ್ಲಿ ಎಳೆಯ ವಯಸ್ಸಿನಲ್ಲಿ ಆಸಕ್ತಿ ಹೊಂದಿದ್ದ ಚಿತ್ರಕಲೆಯನ್ನೇ ನೆಚ್ಚಿನ ಹವ್ಯಾಸವಾಗಿ ಮುಂದುವರಿಸಿಕೊಂಡು ತನ್ನೊಳಗಿನ […]